ರಾಹುಲ್ ಆಟಕ್ಕೆ ಮನಸೋತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ರಾಹುಲ್ ಮುಂದಿನ ದಿನಗಳಲ್ಲಿ ಫುಲ್‌ಟೈಮ್ ಕೀಪರ್ ಆಗಿ ಮುಂದುವರಿಯುವ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ರಿಷಬ್ ಪಂತ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಿದರೂ ಪಂತ್ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಗಾಯಗೊಂಡು ರಿಷಬ್ ಪಂತ್ ತಂಡದಿಂದ ಹೊರಬಿದ್ದ ಬಳಿಕ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಅವಕಾಶವನ್ನು ರಾಹುಲ್ ಉತ್ತಮವಾಗಿ ಬಳಸಿಕೊಂಡಿದ್ದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಗಮನವನ್ನೂ ಸೆಳೆದಿದೆ. ರಾಹುಲ್ ಪ್ರದರ್ಶನದ ಬಗ್ಗೆ ಉತ್ತಮ ಮಾತುಗಳನ್ನು ಹೇಳಿದ್ದಾರೆ. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಪ್ರದರ್ಶನದ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದಾರೆ.

ಗಂಗೂಲಿ ಹೇಳಿದ್ದೇನು:
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಎಲ್ ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿದೆ. ಕೀಪರ್ ಆಗಿ ಮತ್ತು ಬ್ಯಾಟ್ಸ್‌ಮನ್ ಆಗಿ ಕೆ ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಈ ಸರಣಿಯಲ್ಲಿ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಮುಂದುವರಿಸಲು ತೀರ್ಮಾನಿಸಿದೆ ಎಂದಿದ್ದಾರೆ.

ಮ್ಯಾನೇಜ್ಮೆಂಟ್ ತೀರ್ಮಾನ ಮಾಡಲಿದೆ:
ಕರ್ನಾಟಕದ ಬ್ಯಾಟ್ಸ್‌ಮನ್ ಸೀಮಿತ ಓವರ್‌ಗಳಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ರಾಹುಲ್‌ರಿಂದ ಟೆಸ್ಟ್‌ನಲ್ಲೂ ಅದ್ಭುತ ಇನ್ನಿಂಗ್ಸ್‌ಗಳನ್ನು ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ. ಆದರೆ ಮುಂದಿನ ವಿಶ್ವಕಪ್ ದೃಷ್ಟಿಯಿಂದ ವಿಕೆಟ್ ಕೀಪರ್ ಆಯ್ಕೆ ವಿಚಾರವಾಗಿ ಗಂಗೂಲಿ, ಇದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಮತ್ತು ಆಯ್ಕೆ ಮಂಡಳಿ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.

ಆಪತ್ಬಾಂಧವ ರಾಹುಲ್
ಕೆ.ಎಲ್ ರಾಹುಲ್ ಸದ್ಯ ಟೀಮ್ ಇಂಡಿಯಾದ ಆಪತ್ಭಾಂಧವರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂಡಕ್ಕೆ ಅವಶ್ಯಕವಿರುವಾಗ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್‌ಗಿಳಿದು ನಾಯಕನ ಹಾಗೂ ತಂಡದ ಮ್ಯಾನೇಜ್‌ಮೆಮಟ್‌ನ ಗಮನ ಸೆಳೆದಿದ್ದಾರೆ.

ರಾಹುಲ್ ಹೇಳಿಕೆ:
ಕೆಎಲ್ ರಾಹುಲ್ ಇದಕ್ಕೂ ಮುನ್ನ ತಮಗೆ ನೀಡಿರುವ ಹೊಸ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದರು. ತನಗೆ ಸಿಕ್ಕ ಹೊಸ ಜವಾಬ್ದಾರಿಯನ್ನು ತಾನು ಆನಂದಿಸುತ್ತಿದ್ದೇನೆ. ವಿಕೆಟ್ ಕೀಪಿಂಗ್ ನನಗೇನು ಹೊಸತಲ್ಲ. ಐಪಿಎಲ್ ಮತ್ತು ದೇಸಿ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಅನುಭವವಿದ ಎಂದು ಹೇಳಿಕೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications