Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈಯಲ್ಲಿ ಐಪಿಎಲ್ ನಡೆಸಿಯೇ ನಡೆಸುತ್ತೇವೆ: ಪಟ್ಟು ಹಿಡಿದ ಗಂಗೂಲಿ

Sourav Ganguly Confirms Mumbai Will Host IPL 2021 Matches

ನವದೆಹಲಿ: ಮುಂಬೈಯಲ್ಲಿ ಕೊರೊನಾವೈರಸ್ ಪ್ರಕರಣಗಳು ದಿನೇ ದಿನೇ ಆತಂಕಕಾರಿಯಾಗಿ ಹೆಚ್ಚುತ್ತಿದ್ದರೂ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳನ್ನು ಮಹಾನಗರ ಮುಂಬೈಯಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ ಗಂಗೂಲಿ ಖಾತರಿಪಡಿಸಿದ್ದಾರೆ.

ಮುಂಬೈಯಲ್ಲಿ ಇತ್ತೀಚೆಗಂತೂ ಕೋವಿಡ್-19 ಪ್ರಕರಣಗಳು ಮಿತಿ ಮೀರಿ ಹೆಚ್ಚುತ್ತಿವೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಮೈದಾನ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅಲ್ಲದೆ 5 ಮಂದಿ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿತ್ತು.

ಸೋಂಕು ಆತಂಕ ಹುಟ್ಟಿಸುತ್ತಿದ್ದರೂ ಬಿಸಿಸಿಐ ಮುಂಬೈಯಲ್ಲಿ ಟೂರ್ನಿ ಆಯೋಜನೆಯ ವಿಚಾರದಲ್ಲಿ ಹಿಂದೆಸರಿಯುವಂತೆ ಕಾಣುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ಮುಂಬೈಯಲ್ಲಿ ಲಾಕ್‌ಡೌನ್‌ ಹೇರಿದರೂ ಮುಂಬೈಯಲ್ಲಿ ಐಪಿಎಲ್ ನಡೆಸುವುದಾಗಿ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಐಪಿಎಲ್ ಪಂದ್ಯಗಳು ಮುಂಬೈ ನಡೆಯಲಿವೆ. ಒಮ್ಮೆ ನೀವು ಬಯೋ ಬಬಲ್‌ಗೆ ಪ್ರವೇಶಿಸಿಬಿಟ್ಟರೆ ಮತ್ತೆ ಏನೂ ಆಗಲಾರದು. ಕಳೆದ ಸೀಸನ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೂ ಇಂಥದ್ದೇ ಸಂದರ್ಭಗಳು ಎದುರಾಗಿದ್ದವು. ಆದರೆ ಒಮ್ಮೆ ಟೂರ್ನಿ ಆರಂಭಗೊಂಡ ಬಳಿಕ ಎಲ್ಲವೂ ಚೆನ್ನಾಗಿ ನಡೆಯಲಾರಂಭಿಸಿತು,' ಎಂದು ಗಂಗೂಲಿ ಹೇಳಿದ್ದಾರೆ.

Story first published: Monday, April 5, 2021, 10:48 [IST]
Other articles published on Apr 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+