Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವುಡ್‌ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಸೌರವ್ ಗಂಗೂಲಿ

Sourav Ganguly discharged from hospital

ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಲ್ಕತ್ತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗುರುವಾರ ತಮ್ಮ ನಿವಾಸಕ್ಕೆ ವಾಪಾಸಾಗಿದ್ದಾರೆ. ಕಳೆದ ಐದು ದಿನಗಳಿಂದ ಗಂಗೂಲಿ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.

ಆಸ್ಪತ್ರೆಯಿಂದ ಮನೆಗೆ ಮರಳುವ ಮುನ್ನ ಗಂಗೂಲಿ ಆಸ್ಪತ್ರೆಯ ಮುಂದೆ ನೆರೆದಿದ್ದ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು. ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಗಂಗೂಲಿ ಧನ್ಯವಾದ ಹೇಳಿದರು. ಜೊತೆಗೆ ಆಸ್ಪತ್ರೆಯ ವೈದ್ಯರ ತಂಡಕ್ಕೂ ಗಂಗೂಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಿಗದಿಯ ಪ್ರಕಾರ ಸೌರವ್ ಗಂಗೂಲಿ ಬುಧವಾರ ಮನೆಗೆ ವಾಪಾಸಾಗಬೇಕಿತ್ತು. ಆದರೆ ಹೆಚ್ಚುವರಿ ಒಂದು ದಿನ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸೌರವ್ ಗಂಗೂಲಿ ಬಯಸಿದ್ದರು. ಹೀಗಾಗಿ ಗುರುವಾರ ಬೆಳಗ್ಗೆ ಸೌರವ್ ಗಂಗೂಲಿ ಆಸ್ಪತ್ರೆ ಬಿಡುಗಡೆಯಾಗಿದ್ದು ಮನೆಗೆ ಮರಳಿದ್ದಾರೆ. ನಿತ್ಯವೂ ವೈದ್ಯರು ಗಂಗೂಲಿ ಆರೋಗ್ಯ ಸ್ಥಿತಿಗಳನ್ನು ಅವಲೋಕಿಸಲಿದ್ದಾರೆ ಎಂದು ಆಸ್ಪತ್ರೆಯ ಮುಖ್ಯಸ್ಥೆ ಡಾ. ರೂಪಾಲಿ ಬಸು ಮಾಹಿತಿ ನೀಡಿದ್ದಾರೆ.

ಕಳೆದ ಶನಿವಾರ ಕೊಲ್ಕತ್ತಾದಲ್ಲಿರುವ ತಮ್ಮ ಮನೆಯ ಜಿಮ್‌ನಲ್ಲಿದ್ದಾಗ ಸೌರವ್ ಗಂಗೂಲಿಗೆ ಎದೆಯಲ್ಲಿ ನೋವಿ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದನ್ನು ತಿಳಿಸಿದ ವೈದ್ಯರು ಅವರಿಗೆ ಅಂದೇ ಆ್ಯಜೊಯೋಪ್ಲಾಸ್ಟಿ ನಡೆಸಿದ್ದರು.

ಮಂಗಳವಾರ ದೇಶದ ಖ್ಯಾತ ಹೃದ್ರೋಗ ತಜ್ಞ ಕನ್ನಡಿಗ ಡಾ. ದೇವಿ ಶೆಟ್ಟಿ ಆಸ್ಪತ್ರೆಗೆ ಬೇಟಿ ನೀಡಿ ಸೌರವ್ ಗಂಗೂಲಿಯ ಆರೋಗ್ಯವನ್ನು ಪರೀಕ್ಷಿಸಿದ್ದರು. ಗಂಗೂಲಿ ಆರೋಗ್ಯವಾಗಿದ್ದಾರೆ ಬುಧವಾರ ಅವರು ತಮ್ಮ ಮನೆಗೆ ತೆರಳಬಹುದು ಎಂದು ಪ್ರತಿಕ್ರಿಯೆ ನೀಡಿದ್ದರು.

Story first published: Thursday, January 7, 2021, 11:44 [IST]
Other articles published on Jan 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+