Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌, ರೋಹಿತ್‌ ನಿವೃತ್ತಿಯ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಈ ಇಬ್ಬರೂ ಆಟಗಾರರು ಬರೀ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯಲಿದ್ದಾರೆ. ಈ ಇಬ್ಬರೂ ಸ್ಟಾರ್ ಆಟಗಾರರ ನಿವೃತ್ತಿಯ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಸೌರವ್ ಗಂಗೂಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆಯೂ ದಾದಾ ಮಾತನಾಡಿದ್ದಾರೆ. ಕ್ರಿಕೆಟ್‌ ಆಟಗಾರರ ಬದುಕು ಒಮ್ಮೆ ನಿಲ್ಲಲೇಬಕು. ಅವರ ಆಟ ಒಂದೊಂದು ದಿನ ದೂರ ಹೋಗುತ್ತಾರೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

Sourav Ganguly Discusses Kohli and Rohit s Test Retirement Future Plans

ಮುಂದಿನ ಏಕದಿನ ವಿಶ್ವಕಪ್ 2027 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ವೇಳೆಗೆ ವಿರಾಟ್‌ಗೆ 38, ರೋಹಿತ್‌ಗೆ 40 ವರ್ಷ ವಯಸ್ಸಾಗುತ್ತದೆ. ಟೀಮ್ ಇಂಡಿಯಾ ಈ ವಿಶ್ವಕಪ್‌ ವೇಳೆಗೆ 27 ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ. ಈ ವೇಳೆ ವರ್ಷದಲ್ಲಿ 15 ಪಂದ್ಯಗಳನ್ನು ಆಡುವುದು ಸುಲಭವಲ್ಲ. ನಾನು ಅವರಿಗೆ ಯಾವುದೇ ಸಲಹೆ ನೀಡುವುದಿಲ್ಲ. ಏಕೆಂದರೆ ಅವರಿಬ್ಬರೂ ತಮ್ಮ ತಮ್ಮ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಸೌರವ್ ಗಂಗೂಲಿ ತಮ್ಮ ಹೇಳಿಕೆಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ವಿರಾಟ್‌ ಟೆಸ್ಟ್‌ಗೆ ನಿವೃತ್ತಿ ನೀಡಿದ್ದು ಅಚ್ಚರಿಯಿಲ್ಲ. ಆದರೆ ವಿರಾಟ್ ಕೊಹ್ಲಿಗೆ ಪರ್ಯಾಯವನ್ನು ಕಂಡುಹಿಡಿಯುವುದು ಸುಲಭವಲ್ಲ" ಎಂದು ಹೇಳಿದ್ದಾರೆ.

ಕೋಚ್‌ ಆಗ್ತೀರಾ?

ಇದೇ ಸಂದರ್ಶನದ ವೇಳೆ ಸೌರವ್ ಗಂಗೂಲಿ ಅವರಿಗೆ ಟೀಮ್ ಇಂಡಿಯಾದ ಹೆಡ್‌ ಕೋಚ್ ಆಗುವ ಬಯಕೆ ಇದೆಯಾ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ದಾದಾ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಸಾಕಷ್ಟು ಹುದ್ದೆಗಳನ್ನು ನಿಭಾಯಿಸಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ತಿಳಿದಿಲ್ಲ. ನನಗೆ ಇನ್ನೂ 50 ವರ್ಷ, ಕೋಚ್ ಆಗಲು ನನ್ನ ಅಭ್ಯಂತರವೇನು ಇಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯ ಪ್ರವೇಶಿಸುತ್ತಿರಾ?

ದಿಗ್ಗಜ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಅವರಿಗೆ ಮುಂದಿನ ದಿನಗಳಲ್ಲಿ ನೀವು ಏನಾದ್ರೂ ರಾಜಕೀಯ ಪ್ರವೇಶಿಸುತ್ತೀರಾ ಎಂದು ಕೇಳಲಾಯಿತು. ನನಗೆ ಈ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸೌರವ್ ಗಂಗೂಲಿ ವಿವಿಎಸ್‌ ಲಕ್ಷ್ಮಣ್ ಹಾಗೂ ತಮ್ಮ ನಡುವೆ ನಡೆದಿದ್ದ ಒಂದು ಮನಸತಾಪವನ್ನು ಸಹ ತಿಳಿಸಿದ್ದಾರೆ. ವಿಶ್ವಕಪ್ ತಂಡದಿಂದ ಲಕ್ಷ್ಮಣ್ ಅವರನ್ನು ಕೈ ಬಿಟ್ಟಿದ್ದಕ್ಕಾಗಿ ಅವರು ನನ್ನ ಜೊತೆ ಮೂರು ತಿಂಗಳು ಮಾತನಾಡುವುದನ್ನೇ ಬಿಟ್ಟಿದ್ದರು ಎಂದು ಗಂಗೂಲಿ ಹೇಳಿದ್ದಾರೆ.

Story first published: Monday, June 23, 2025, 8:40 [IST]
Other articles published on Jun 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+