ಮಹಿಳಾ ಕೋಚ್ ಸ್ಥಾನದಿಂದ ರಾಮನ್ ಕೆಳಗಿಳಿಸಿದ್ದಕ್ಕೆ ಗಂಗೂಲಿ ಬೇಸರ

ನವದೆಹಲಿ: 2018ರಲ್ಲಿ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರನ್ನು ಸ್ಥಾನದಿಂದ ಕಳೆಗಿಳಿಸಿ ಡಬ್ಲ್ಯೂವಿ ರಾಮನ್ ಅವರನ್ನು ಕೋಚ್ ಆಗಿ ಆರಿಸಲಾಗಿತ್ತು. ಕಳೆದ ವಾರ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮತ್ತೆ ರಾಮನ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ಪೊವಾರ್‌ಗೆ ಮುಖ್ಯ ಕೋಚ್ ಹುದ್ದೆ ನೀಡಿದೆ. ಇದು ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೂ ಕಾರಣವಾಗಿದೆ.
ಮಹಿಳಾ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಜೊತೆಗಿನ ವಿವಾದದೊಂದಿಗೆ ರಮೇಶ್ ಪೊವಾರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 2020ರ ಟಿ20 ವಿಶ್ವಕಪ್‌ನಲ್ಲಿ ರಾಮನ್ ಮುಂದಾಳತ್ವದ ಮಹಿಳಾ ತಂಡ ಫೈನಲ್‌ಗೆ ಪ್ರವೇಶಿಸಿದ್ದರೂ ಈ ಬಾರಿ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.
ಇಲ್ಲೀವರೆಗೂ ಸುಮ್ಮನಿದ್ದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮಹಿಳಾ ಕೋಚ್ ಸ್ಥಾನದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ, ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕ್ರಿಕ್‌ಬಝ್ ವರದಿ ಹೇಳಿದೆ.
ರಾಮನ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿರುವುದು ಸ್ವತಃ ಗಂಗೂಲಿಗೆ ಅಚ್ಚರಿ ಉಂಟು ಮಾಡಿತ್ತು ಎಂದು ವರದಿ ಹೇಳಿದೆ. ರಾಮನ್ ಮುಂದಾಳತ್ವದಲ್ಲಿ ಮಹಿಳಾ ತಂಡ 5 ಟಿ20 ಸರಣಿ ಮತ್ತು 5 ಏಕದಿನ ಸರಣಿಗಳನ್ನಾಡಿತ್ತು. ಇದರಲ್ಲಿ ಮಹಿಳಾ ತಂಡ ಸೋತಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಮಾತ್ರ. ಆದರೂ ರಾಮನ್ ಅವರನ್ನು ಸಿಎಸಿ ಕೋಚ್ ಸ್ಥಾನ ಕೆಳಗಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications