ಲಂಡನ್. ಫೆ. 18: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಮೆರೀಲ್ ಬೋನ್ ಕ್ರಿಕೆಟ್ ಕ್ಲಬ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ.
2014 ರ ಜುಲೈನಿಂದ ಎಂಸಿಸಿ ವಿಶ್ವಕ್ರಿಕೆಟ್ ಸಮಿತಿಯ ಸದಸ್ಯರಾಗಿ ಗಂಗೂಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಪರ 424 ಏಕದಿನ ಪಂದ್ಯ ಆಡಿರುವ ಗಂಗೂಲಿಗೆ ಮತ್ತೊಂದು ಗೌರವ ಸಿಕ್ಕಿದೆ.[ಕ್ರಿಕೆಟ್ ದೇವರ ಆತ್ಮಕಥೆ ಬಿಡುಗಡೆಗೆ ಯಾರೆಲ್ಲ ಬಂದಿದ್ದರು?]

2000 ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ಸೌರವ್ ಗಂಗೂಲಿ 195 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
ವಿಶ್ವ ಕಂಡ ಅತ್ಯುನ್ನತ ಆಟಗಾರರಲ್ಲಿ ಸೌರವ್ ಸಹ ಒಬ್ಬರು. ಭಾರತವನ್ನು ಪ್ರತಿನಿಧಿಸುತ್ತಿರುವ ಗಂಗೂಲಿಗೆ ಈ ಗೌರವ ನೀಡಲು ಹೆಮ್ಮೆ ಪಡುತ್ತಿದ್ದೇವೆ ಎಂದು ಎಂಸಿಸಿ ಪ್ರಮುಖ ಜಾನ್ ಸ್ಟೆಪ್ ಸನ್ ಹೇಳಿದ್ದಾರೆ.[ಬಂಗಾಳದ ಹುಲಿ' ಗಂಗೂಲಿಗೆ ಮತ್ತೆ ಗಾಳ ಹಾಕಿದ ಬಿಜೆಪಿ]
ಲಾರ್ಡ್ಸ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಸೌರವ್ ಗಂಗೂಲಿ ನಾಟ್ ವೆಸ್ಟ್ ಸರಣಿಯನ್ನು ಜಯಸಿದ್ದರು. ಅಲ್ಲದೇ 2003ರ ಏಕದಿನ ವಿಶ್ವಕಪ್ ಫೈನಲ್ ಗೆ ಭಾರತ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.