Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ದುಬೈಗೆ ಪ್ರಯಾಣ ಬೆಳೆಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Sourav Ganguly Heads To Uae To Oversee Ipl 2020 Preparations

ಐಪಿಎಲ್‌ಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣವನ್ನು ಬೆಳೆಸಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ 13ನೇ ಆವೃತ್ತಿ ಆರಂಭವಾಗಲಿದ್ದು ಅದರ ಸಿದ್ಧತೆಗಾಗಿ ಗಂಗೂಲಿ ಯುಎಇಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಂಗೂಲಿ ಪೋಸ್ಟ್ ಮಾಡಿದ್ದಾರೆ.

'ಕಳೆದ ಅರು ತಿಂಗಳಿನಲ್ಲಿ ನನ್ನ ಮೊದಲ ವಿಮಾನ ಪ್ರಯಾಣ ದುಬೈನತ್ತ' ಎಂದು ಸೌರವ್ ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ವಿಮಾನದಲ್ಲಿನ ಪ್ರಯಾಣದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಪ್ರಯಾಣದ ಪ್ರೊಟೋಕಾಲ್ ಪ್ರಕಾರ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಗಂಗೂಲಿ ದುಬೈಗೆ ಹಾರಿದ್ದಾರೆ.

ಬಿಸಿಸಿಐನ ಮುಖ್ಯಸ್ಥ ಸ್ಥಾನದಲ್ಲಿರುವ ಗಂಗೂಲಿಗೆ ಈ ಬಾರಿಯ ಐಪಿಎಲ್ ಆವೃತ್ತಿ ನಡೆಸುವುದು ಬಹಳಷ್ಟು ಸವಾಲಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಈ ಬಹುಕೋಟಿ ಕ್ರಿಕೆಟ್ ಲೀಗ್‌ ಕೊರೊನಾ ವೈರಸ್‌ನ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂಡೂಡಲ್ಪಟ್ಟಿತ್ತು. ಕೊನೆಗೂ ಈಗ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಐಪಿಎಲ್‌ನ ಚೇರ್‌ಮನ್ ಬ್ರಿಜೇಷ್ ಪಟೇಲ್ ಹಾಗೂ ಪ್ರಮುಖ ಪದಾಧಿಕಾರಿಗಳು ಈಗಾಗಲೇ ದುಬೈನಲ್ಲಿದ್ದಾರೆ. ಐಪಿಎಲ್ ಆರಂಭಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಅಲ್ಲಿಂದಲೇ ನಡೆಸುತ್ತಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಪ್ರಯಾಣದ ನೀತಿ ಸಂಹತೆಗಳು ಇದ್ದ ಕಾರಣ ಎಲ್ಲವನ್ನೂ ನಿವಾರಿಸಿಕೊಂಡು ಈಗಾಗಲೇ ವೇಳಾಪಟ್ಟಿಯನ್ನೂ ಬಿಡುಗಡೆಗೊಳಿಸಲಾಗಿದೆ.

ಸೆಪ್ಟೆಂಬರ್ 19ರಿಂದ ಈ ಬಾರಿಯ ಐಪಿಎಲ್‌ಗೆ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಳಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ.

Story first published: Wednesday, September 9, 2020, 20:02 [IST]
Other articles published on Sep 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+