Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾವೈರಸ್ ಭೀತಿ: ಹೋಮ್ ಕ್ವಾರಂಟೈನ್‌ನಲ್ಲಿ ಸೌರವ್ ಗಂಗೂಲಿ

Sourav Ganguly in home quarantine after elder brother tests positive for Covid-19

ಕೋಲ್ಕತ್ತಾ, ಜುಲೈ 16: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ತನ್ನ ಅಣ್ಣ ಮತ್ತು ಕ್ರಿಕೆಟ್ ಅಸೋಸಿಯೇಶನ್ ಆಫ್ ವೆಸ್ಟ್ ಬೆಂಗಾಲ್‌ನ ಜಂಟಿ ಕಾರ್ಯದರ್ಶಿ ಸ್ನೇಹಸಿಶ್ ಗಂಗೂಲಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಗಂಗೂಲಿ ಐಸೊಲೇಶನ್‌ನಲ್ಲಿದ್ದಾರೆ.

ವೆಸ್ಟ್ ಬೆಂಗಾಲ್ ತಂಡದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಆಗಿರುವ ಸ್ನೇಹಸಿಶ್ ಅವರ ಕೊರೊನಾವೈರಸ್ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದ್ದರಿಂದ ಅವರನ್ನು ಕೋಲ್ಕತ್ತಾದಲ್ಲಿರುವ ಬೆಲ್ಲೆ ವ್ಯೂ ಹಾಸ್ಪಿಟಲ್‌ನಲ್ಲಿ ದಾಖಲಿಸಲಾಗಿದೆ.

'ಸ್ನೇಹಸಿಶ್‌ಗೆ ಕಳೆದ ಕೆಲ ದಿನಗಳಿಂದ ಜ್ವರ ಕಾಡುತ್ತಿತ್ತು. ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೊರನಾವೈರಸ್ ಪಾಸಿಟಿವ್ ಇರುವುದು ಕಂಡುಬಂದಿದೆ. ಹೀಗಾಗಿ ಅವರನ್ನು ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ,' ಎಂದು ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್‌ ಪಿಟಿಐಗೆ ತಿಳಿಸಿದೆ.

'ಗಂಗೂಲಿ ಅಣ್ಣನ ಕೊರೊನಾ ವರದಿ ಸಂಜೆಯ ಹೊತ್ತಿಗೆ ದೊರೆತಿದೆ. ಆರೋಗ್ಯಾ ಮುನ್ನಚ್ಚರಿಕೆಯಾಗಿ ಸೌರವ್ ಕೂಡ ನಿಗದಿತ ಕಾಲಾವಧಿಯವರೆಗೆ ಹೋಮ್ ಕ್ವಾರಂಟೈನ್‌ನಲ್ಲಿರಲಿದ್ದಾರೆ,' ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಆಪ್ತ ಮೂಲವೊಂದು ಮಾಹಿತಿ ನೀಡಿದೆ.

Story first published: Thursday, July 16, 2020, 15:46 [IST]
Other articles published on Jul 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+