ಚಾಂಪಿಯನ್ಸ್ ಟ್ರೋಫಿ ಶ್ರೇಷ್ಠ XI ಗೆ ಸೌರವ್ ಗಂಗೂಲಿ ನಾಯಕ
ಬೆಂಗಳೂರು, ಮೇ 09: ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ಇಂಗ್ಲೆಂಡಿನಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಯ ಶ್ರೇಷ್ಠ ಎಲೆವನ್ ಪ್ರಕಟಿಸಲಾಗಿದೆ.
ಭಾರತದಿಂದ ಇಬ್ಬರು ಆಟಗಾರರು ತಂಡದಲ್ಲಿದ್ದು, ಸೌರವ್ ಗಂಗೂಲಿ ನಾಯಕರಾಗಿದ್ದರೆ, ರಾಹುಲ್ ದ್ರಾವಿಡ್ ಅವರು ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ(ಮೇ 09) ಈ ತಂಡವನ್ನು ಪ್ರಕಟಿಸಿದೆ. [#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
2002 ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಕೂಡಾ ಹೌದು. 2002ರಲ್ಲಿ ಶ್ರೀಲಂಕಾ ಜತೆಗೆ ಜಂಟಿ ವಿಜೇತರೆನಿಸಿದ ಟೀಂ ಇಂಡಿಯಾಕ್ಕೆ ಸೌರವ್ ಗಂಗೂಲಿ ನಾಯಕರಾಗಿದ್ದರು. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ತಂಡಕ್ಕೆ ಜಯ ತಂದಿತ್ತರು.
ಇಂಗ್ಲೆಂಡಿನಲ್ಲಿ ಜೂನ್ 1ರಿಂದ 8ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭಾರತ ತಂಡ ಜೂನ್ 4ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

#1 ಕ್ರಿಸ್ ಗೇಲ್
ವೆಸ್ಟ್ ಇಂಡೀಸ್ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಓಪನರ್ ಆಗಿ ಆಯ್ಕೆ ಮಾಡಲಾಗಿದೆ. 17 ಪಂದ್ಯಗಳಲ್ಲಿ 791 ರನ್ ಗಳಿಸಿದ್ದು, 17 ವಿಕೆಟ್ ಕಬಳಿಸಿದ್ದಾರೆ.

#2 ಹರ್ಷಲ್ ಗಿಬ್ಸ್
ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಹರ್ಷಲ್ ಗಿಬ್ಸ್ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ 10 ಪಂದ್ಯಗಳಿಂದ 460 ರನ್ ಗಳಿಸಿದ್ದಾರೆ.

# ಸೌರವ್ ಗಂಗೂಲಿ
ಮೂರನೇ ಕ್ರಮಾಂಕದಲ್ಲಿ ಸೌರವ್ ಗಂಗೂಲಿ ಇದ್ದು, ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಭಾರತದ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ 13 ಪಂದ್ಯಗಳಿಂದ 665ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡಿದ್ದಾರೆ. 2000ರ ಟೂರ್ನಿಯ ಸೆಮಿಫೈನಲ್, ಫೈನಲ್ ನಲ್ಲಿ ಸೆಂಚುರಿ ಬಾರಿಸಿದ್ದರು. ಆದರೆ, ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿತ್ತು.

#4 ಜಾಕ್ ಕಾಲಿಸ್
ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಕ್ ಕಾಲಿಸ್ ಅವರು 20 ವಿಕೆಟ್ ಹಾಗೂ 653ರನ್ ಗಳಿಸಿದ್ದು, 1998ರ ಉದ್ಘಾಟನಾ ಟೂರ್ನಿಯ ವಿಜೇತ ತಂಡದ ಸದಸ್ಯರಾಗಿದ್ದರು. ಸೆಮಿಫೈನಲ್ ಹಾಗೂ ಫೈನಲಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.

#5 ಡೇಮಿಯನ್ ಮಾರ್ಟಿನ್
2006ರ ಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಡೇಮಿಯನ್ ಮಾರ್ಟಿನ್ ಅವರು ಒಟ್ಟಾರೆ, 12 ಪಂದ್ಯಗಳಿಂದ 492 ರನ್ ಗಳಿಸಿದ್ದಾರೆ.

#6 ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ ಅವರು 2002ರಲ್ಲಿ ಭಾರತದ ವಿಕೆಟ್ ಕೀಪರ್ ಆಗಿ ಆಡಿದ್ದರು. ಈ ತಂಡದ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಒಟ್ಟಾರೆ, 19 ಪಂದ್ಯಗಳಿಂದ 627ರನ್ ಗಳಿಸಿದ್ದಾರೆ.

#7 ಶೇನ್ ವಾಟ್ಸನ್
ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು 17 ವಿಕೆಟ್ ಹಾಗೂ 453 ರನ್ ಗಳಿಸಿದ್ದು, ಎರಡು ಶತಕ ಸೇರಿದೆ. 2006 ಹಾಗೂ 2009ರಲ್ಲಿ ಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾರಗಿದ್ದರು.

#8 ಡೇನಿಯಲ್ ವೆಟ್ಟೋರಿ
ನ್ಯೂಜಿಲೆಂಡಿನ ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ 17 ಪಂದ್ಯಗಳಿಂದ 18 ವಿಕೆಟ್ ಹಾಗೂ 299ರನ್ ಗಳಿಸಿದ್ದಾರೆ. 79ರನ್ ಗರಿಷ್ಠ ವೈಯಕ್ತಿಕ ಸ್ಕೋರ್.

#9 ಮಿಲ್ಸ್
ನ್ಯೂಜಿಲೆಂಡ್ ನ ವೇಗಿ ಮಿಲ್ಸ್ (ಬಲ ಗಡೆ) ಅವರು 15 ಪಂದ್ಯಗಳಿಂದ 28ವಿಕೆಟ್ ಪಡೆದಿದ್ದು, 2006, 2009 ಹಾಗೂ 2013ರ ಆವೃತ್ತಿಯಲ್ಲಿ ಆಡಿದ್ದರು.

#10 ಮುತ್ತಯ್ಯ ಮುರಳೀಧರನ್
ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧನ್ ಅವರು17 ಪಂದ್ಯಗಳಿಂದ 24ವಿಕೆಟ್ ಗಳನ್ನು ಪಡೆದಿದ್ದಾರೆ. 2002ರಲ್ಲಿ ಭಾರತದ ಜತೆ ಜಂಟಿ ವಿಜೇತ ತಂಡವಾದ ಶ್ರೀಲಂಕಾದ ಸದಸ್ಯರಾಗಿದ್ದರು.

#11 ಗ್ಲೆನ್ ಮೆಗ್ರಾ
ಆಸ್ಟ್ರೇಲಿಯಾದ ವೇಗಿ 12 ಪಂದ್ಯಗಳಿಂದ 21 ವಿಕೆಟ್ ಗಳಿಸಿದ್ದು, 2006 ಆವೃತ್ತಿಯ ವಿಜೇತ ತಂಡದ ಸದಸ್ಯರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications