Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಐಪಿಎಲ್ ಆಯೋಜನಾ ಸ್ಥಳ ಹಾಗೂ 'ಮೆಗಾ ಆಕ್ಷನ್' ಬಗ್ಗೆ ಸೌರವ್ ಗಂಗೂಲಿ ಮಾಹಿತಿ

Sourav Ganguly on hosting next IPL and mega auction

ಐಪಿಎಲ್ 2020 ಆವೃತ್ತಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೂರು ಪ್ಲೇಆಫ್ ಪಂದ್ಯಗಳು ಹಾಗೂ ಒಂದು ಫೈನಲ್ ಪಂದ್ಯ ಮಾತ್ರವೇ ಬಾಕಿ ಉಳಿದಿದೆ. ಪ್ರೇಕ್ಷಕರ ಗೈರಿನ ಮಧ್ಯೆಯೂ ಈ ಬಾರಿಯ ಐಪಿಎಲ್ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಿನ ಐಪಿಎಲ್ ಆಯೋಜನೆ ಬಗ್ಗೆ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಿನ ಐಪಿಎಲ್ ಆವೃತ್ತಿ ಏಪ್ರಿಲ್-ಮೇ ತಿಂಗಳಿನಲ್ಲಿ ಭಾರತದಲ್ಲೇ ನಡೆಯಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹಿಂದುಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗಂಗೂಲಿ "ಮುಂದಿನ ಐಪಿಎಲ್‌ಗೂ ಮುನ್ನ ವ್ಯಾಕ್ಸಿನ್ ಬರುವ ಸಾಧ್ಯತೆಯಿದೆ. ಹಾಗಾಗಿ ನಾವು ಆಯೋಜನೆ ಮಾಡಬಹುದು" ಎಂದು ಗಂಗೂಲಿ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿ ಕೊರೊನಾ ವೈರಸ್‌ ಭಾರತದಲ್ಲಿ ವ್ಯಾಪಕವಾಗಿರುವ ಕಾರಣದಿಂದಾಗಿ ಯುಎಇನಲ್ಲಿ ಏರ್ಪಡಿಸುವ ತೀರ್ಮಾನವನ್ನು ತೆಗೆದುಕೊಲ್ಳಲಾಯಿತು. ಅದಕ್ಕೂ ಮುನ್ನ 13ನೇ ಆವೃತ್ತಿ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಲಾಕ್‌ಡೌನ್‌ನ ಕಾರಣದಿಂದಾಗಿ ಸೆಪ್ಟೆಂಬರ್‌ವರೆಗೆ ಮುಂದೂಡಲ್ಪಟ್ಟಿತು.

ಇನ್ನು ಇದೇ ಸಂದರ್ಭದಲ್ಲಿ ಗಂಗೂಲಿ ಮೆಗಾ ಆಕ್ಷನ್ ಬಗ್ಗೆಯೂ ಪ್ರತಿಕ್ರಿಯಿಸಿದರು. "ಈ ಬಗ್ಗೆ ಈವರೆಗೂ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಈ ಬಾರಿಯ ಆವೃತ್ತಿ ಸಂಪೂರ್ಣವಾಗಲಿ. ಬಳಿಕ ನಾವು ಇದರ ಕುರಿಯತಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ" ಸೌರವ್ ಗಂಗೂಲಿ.

ಚೆನ್ನೈ ಸೂಪರ್ ಕಿಂಗ್ಸ್‌ನಂತಾ ತಂಡಗಳು ಕೋರ್ ತಂಡವನ್ನು ಬದಲಿಸಲು ಬಯಸುತ್ತಿದೆ. ಹೀಗಾಗಿ ಈ ಬಾರಿ ಮೆಗಾ ಆಕ್ಷನ್ ನಡೆಯಲಿದೆಯೋ ಆಥವಾ ಕಳೆದ ಬಾರಿಯಂತೆ ಮನಿ ಬಿಡ್ಡಿಂಗ್ ನಡೆಯಲಿದೆಯೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈ ಕುರಿತ ಪ್ರಶ್ನೆಗೆ ಗಂಗೂಲಿ ಐಪಿಎಲ್ ಮುಕ್ತಾಯದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ

Story first published: Wednesday, November 4, 2020, 20:08 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+