T20 World Cup 2024: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಯಶಸ್ವಿಯಾಗಿ ಅರ್ಧ ಹಂತವನ್ನು ಮುಗಿಸಿದ್ದು, ಮೇ 26ರಂದು ನಡೆಯುವ ಫೈನಲ್‌ವರೆಗೆ ಶ್ರೀಮಂತ ಟಿ20 ಕ್ರಿಕೆಟ್ ಸಾಗಲಿದೆ.
2024ರ ಐಪಿಎಲ್ ಮುಗಿದ ಕೇವಲ ಒಂದು ವಾರದೊಳಗೆ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುತ್ತಿವೆ.

ಇದೇ ವೇಳೆ. ಜೂನ್ 2ರಿಂದ ನಡೆಯಲಿರುವ 2024ರ ಟಿ20 ವಿಶ್ವಕಪ್‌ನಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಬೇಕೆಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆಯು ಹತ್ತಿರವಾಗುತ್ತಿದ್ದಂತೆ, ಐಪಿಎಲ್ 2024ರಲ್ಲಿ ತಮ್ಮ ತಮ್ಮ ತಂಡಗಳಿಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರದರ್ಶಿಸುತ್ತಿರುವ ಬ್ಯಾಟಿಂಗ್ ಫಾರ್ಮ್ ಅನ್ನು ಸೌರವ್ ಗಂಗೂಲಿ ಒತ್ತಿಹೇಳಿದ್ದಾರೆ.
ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಖಚಿತ ಆಯ್ಕೆಗಳು ಎಂದು ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ದೃಢಪಡಿಸಿದರು.

ಬುದ್ಧಿವಂತ ಆಯ್ಕೆಗಳನ್ನು ಮಾಡುವ ಆಯ್ಕೆಗಾರರ ಪ್ರಾಮುಖ್ಯತೆಯನ್ನು ಒತ್ತಿಹೇಳಿದ 51 ವರ್ಷದ ಮಾಜಿ ಕ್ರಿಕೆಟಿಗ, ವೈಯಕ್ತಿಕವಾಗಿ ರೋಹಿತ್ ಮತ್ತು ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಪ್ರಮುಖರಾಗಿದ್ದಾರೆ ಎಂದು ನಂಬುತ್ತೇನೆ ಎಂದರು. ಅಲ್ಲದೆ, ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಅವರನ್ನು ಸೌರವ್ ಗಂಗೂಲಿ ಬೆಂಬಲಿಸಿದರು.
"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಖಂಡಿತವಾಗಿಯೂ ಟಿ20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಗೆ ಹೋಗಲಿದ್ದಾರೆ. ನೀವು ವೈಯಕ್ತಿಕವಾಗಿ ನನ್ನನ್ನು ಕೇಳಿದರೆ, ರೋಹಿತ್ ಮತ್ತು ವಿರಾಟ್ ಇಬ್ಬರೂ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಬೇಕು," ಎಂದು ಮಾಜಿ ನಾಯಕ ಸೌರವ್ ಅಭಿಪ್ರಾಯಪಟ್ಟಿದ್ದಾರೆ.
"ಖಂಡಿತವಾಗಿಯೂ, ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಿರಬೇಕು. ವಿರಾಟ್ ಕೊಹ್ಲಿ ಕೂಡ ಇರಬೇಕು, ಆತ ಅತ್ಯುತ್ತಮ ಆಟಗಾರ. 14 ತಿಂಗಳ ನಂತರ ಹಿಂತಿರುಗಿದರೂ ಏನೂ ಸಮಸ್ಯೆ ಇಲ್ಲ," ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ತಿಳಿಸಿದರು.
ಐಪಿಎಲ್ 2024ರಲ್ಲಿ ಮಿಂಚುತ್ತಿರುವ ಕೊಹ್ಲಿ ಮತ್ತು ರೋಹಿತ್
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಪಿಎಲ್ 2024ರ ಆವೃತ್ತಿಯಲ್ಲಿ ವೈಯಕ್ತಿಕವಾಗಿ ಫಲಪ್ರದ ಅಭಿಯಾನ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಈವರೆಗೆ ಆಡಿದ 8 ಪಂದ್ಯಗಳಿಂದ 379 ರನ್‌ಗಳ ಪ್ರಭಾವಶಾಲಿ ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ಮಾಜಿ ನಾಯಕ 63.16ರ ಅತ್ಯುತ್ತಮ ಸರಾಸರಿ ಮತ್ತು 150.39ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇದುವರೆಗೆ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮತ್ತೊಂದೆಡೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್ ಶರ್ಮಾ 8 ಪಂದ್ಯಗಳಿಂದ 43.28ರ ಸರಾಸರಿಯಲ್ಲಿ 303 ರನ್ ಗಳಿಸಿದ್ದಾರೆ. 36ರ ಹರೆಯದ ರೋಹಿತ್ ಶರ್ಮಾ ಒಂದು ಶತಕ ಸಹ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications