ಮಾಸ್ಟರ್ ಲೀಗ್: ಲಿಬ್ರಾ ಲೆಜೆಂಡ್ ತಂಡದಲ್ಲಿ ಗಂಗೂಲಿ
ಮುಂಬೈ, ನ.30: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ನಲ್ಲಿ ಲಿಬ್ರಾ ಲೆಜೆಂಡ್ಸ್ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಟೂರ್ನಿ ನಡೆಯಲಿದ್ದು, ನಿವೃತ್ತ ಕ್ರಿಕೆಟರ್ಸ್ ಗಳು ಮತ್ತೆ ಕಣಕ್ಕಿಳಿಯಲಿದ್ದಾರೆ.
ಮಾಸ್ಟರ್ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅನುಮತಿ ನೀಡಿರುವುದರಿಂದ ಈ ಲೀಗ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಾನ್ಯತೆ ಕೂಡಾ ಸಿಕ್ಕಿದೆ. ಟಿ20 ಮಾದರಿಯ ಈ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಲಿವೆ. ಜನವರಿ 28, 2016ರಿಂದ ಮೊದಲ ಆವೃತ್ತಿ ಶುರುವಾಗಲಿದೆ ಫೆಬ್ರವರಿ 14ರ ತನಕ ನಡೆಯಲಿದೆ.[ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ 20 ಫುಲ್ ಗೈಡ್]

ಪ್ರತಿ ತಂಡದಲ್ಲೂ 15 ಆಟಗಾರರರಂತೆ 90 ಮಂದಿ ಆಟಗಾರರು ಯುಎಇಯ ವಿವಿಧ ಮೈದಾನದಲ್ಲಿ ಆಡಲಿದ್ದಾರೆ. ಗಂಗೂಲಿ ನಮ್ಮ ತಂಡಕ್ಕೆ ಸೇರಿರುವುದು ಅತ್ಯಂತ ಖುಷಿಕೊಟ್ಟಿದೆ ಎಂದು ಲಿಬ್ರಾ ಲೆಜೆಂಡ್ಸ್ ಸಹ ಮಾಲೀಕತ್ವ ಹೊಂದಿರುವ ಪೂಜಾ ಝುಂಜನ್ ವಾಲ ಹೇಳಿದ್ದಾರೆ.
ಬ್ರಿಯಾನ್ ಲಾರಾ, ಆಡಂ ಗಿಲ್ ಕ್ರಿಸ್ಟ್ ,ವಾಸೀಂ ಅಕ್ರಂ, ವಿರೇಂದರ್ ಸೆಹ್ವಾಗ್, ಜಾಕ್ ಕಾಲೀಸ್ ಸೇರಿದಂತೆ ಅನೇಕ ಅಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಸಚಿನ್ ಹಾಗೂ ವಾರ್ನ್ ಅವರ ಆಲ್ ಸ್ಟಾರ್ ಲೀಗ್ ಜನಪ್ರಿಯತೆ ಗಳಿಸಿದ ಮೇಲೆ ಮಾಸ್ಟರ್ಸ್ ಕ್ರಿಕೆಟ್ ಲೀಗ್ ಮೇಲೆ ಕುತೂಹಲ ಹೆಚ್ಚಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications