For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ಮುಂದೆ ವಿಶೇಷ ಬೇಡಿಕೆಯಿಟ್ಟ ಸೌರವ್ ಗಂಗೂಲಿ

Sourav Ganguly praises Hardik Pandya said he should come back to Test cricket

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಮಾಜಿ ನಾಯಕ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಟೆಸ್ಟ್ ತಂಡದ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಭಾರತದ ಟೆಸ್ಟ್ ತಂಡಕ್ಕೆ ವಾಪಾಸಾಗಬೇಕು ಎಂದು ಸೌರವ್ ಗಂಗೂಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮಾತಿಗೆ ಗಂಗೂಲಿ ಪ್ರಮುಖ ಕಾರಣವನ್ನು ಕೂಡ ನೀಡಿದ್ದಾರೆ.

ಗಾಯದ ಕಾರಣದಿಂದಾಗಿ ವಿರಾಮ ಪಡೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ 2022ರ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿ ಬಳಿಕ ಭಾರತದ ಟಿ20 ಹಾಗೂ ಏಕದಿನ ತಂಡಕ್ಕೆ ಮರಳಿದರು. ಆದರೆ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ಇನ್ನು ಕೂಡ ಕಮ್‌ಬ್ಯಾಕ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಮಾತನಾಡಿದ್ದು ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನ ಆಸ್ತಿ ಎಂದು ಬಣ್ಣಿಸಿದ್ದಾರೆ.

"ಟಿ20 ಕ್ರಿಕೆಟ್‌ನಲ್ಲಿ ಸ್ಪೆಶಲಿಸ್ಟ್‌ಗಳು ಇದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಂಡಕ್ಕೆ ಆಸ್ತಿಯಾಗಬಲ್ಲಂತಾ ಆಟಗಾರ. ಅವರು ಟೆಸ್ಟ್ ಕ್ರಿಎಕಟ್‌ಗೆ ಮರಳಬೇಕು ಯಾಕೆಂದರೆ ಅದರಿಂದಾಗಿ ಅವರು ನೆನಪಿನಲ್ಲುಳಿಯುತ್ತಾರೆ. ಅವರು ಏಕದಿನ ಹಾಗೂ ಟಿ20 ಮಾದರಿಯಲ್ಲಿ ಸ್ಪೆಶಲಿಸ್ಟ್ ಆಟಗಾರ. ಆದರೆ ಅತನೋರ್ವ ವಿಶೇಷವಾದ ಕ್ರಿಕೆಟಿಗ" ಎಂದಿದ್ದಾರೆ ಸೌರವ್ ಗಂಗೂಲಿ.

2018ಲ್ಲಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಹಾರ್ದಿಕ್ ಒಆಂಡ್ಯ ಕೊನೆಯ ಬಾರಿಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಬಳಿಕ ಗಾಯಕ್ಕೆ ತುತ್ತಾದ ಅವರು ಹೆಚ್ಚಿನ ಕಾಲ ಕ್ರಿಕೆಟ್‌ನಿಂದ ದೂರವುಳಿಯಬೇಕಾಯಿತು. ಗಾಯ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ನ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಸದ್ಯ ಚೇತರಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಲ್ಲದೆ ವೈಟ್‌ಬಾಲ್ ಮಾದರಿಯಲ್ಲಿ ಬೌಲಿಂಗ್‌ನಲ್ಲಿಯೂ ಮಿಂಚು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

50ರ ಹರೆಯಾದ ಸೌರವ್ ಗಂಗೂಲಿ ಉತ್ತಮ ಆಟಗಾರರು ಎಲ್ಲಾ ಮಾದರಿಯಲ್ಲಿಯೂ ಆಡಬಹುದು ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರೀಡೆಯಲ್ಲಿ ಲಯ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಎಲ್ಲಾ ಮಾದರಿಯಲ್ಲಿಯೂ ಆಡಬಲ್ಲ ಸಾಮರ್ಥ್ಯವಿರುವ ಕೆಲ ಆಟಗಾರರ ಗುಂಪನ್ನು ಆಯ್ಕೆ ಮಂಡಳಿ ಸಿದ್ಧಪಡಿಸಿಕೊಂಡಿರಬೇಕು ಎಂದಿದ್ದಾರೆ.

"ಉತ್ತಮ ಆಟಗಾರರು ಎಲ್ಲಾ ಮಾದರಿಗೂ ಹೊಂದಾಣಿಕೆಯಾಗಬಲ್ಲರು. ಭಾರತ ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಾವಂತರನ್ನು ಹೊಂದಿದ್ದು ಕೆಲವರು ಎಲ್ಲಾ ಮಾದರಿಯಲ್ಲಿಯೂ ಆಡುತ್ತಿದ್ದಾರೆ. ಕ್ರೀಡೆಯಲ್ಲಿ ಲಯ ಬಹಳ ಮುಖ್ಯವಾಗಿರುವ ಕಾರಣ ಅಂಥಾ ಆಟಗಾರರು ಹೆಚ್ಚು ಇರಬೇಕು. ಆದರೆ ಬಿಸಿಸಿಐನಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವವಿರುವ ಕಾರಣ ಆಯ್ಕೆಗಾರರು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅನಿಸುತ್ತಿಲ್ಲ" ಎಂದಿದ್ದಾರೆ ಸೌರವ್ ಗಂಗೂಲಿ

Story first published: Tuesday, March 28, 2023, 15:20 [IST]
Other articles published on Mar 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+