ವಿನೇಶ್ ಪೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ಆಸೆ ಕೊನೆಯ ಕ್ಷಣದಲ್ಲಿ ಕಮರಿದೆ. ನಿಗದಿತ ತೂಕಕ್ಕಿಂತ 100 ಗ್ರಾಮ್ ತೂಕ ಹೆಚ್ಚಿದ್ದರಿಂದ ಇವರನ್ನು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹ ಗೊಳಿಸಲಾಗಿದೆ. ಈ ಸುದ್ದಿ ಭಾರತದ ಕ್ರೀಡಾ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ. ಈ ಬಗ್ಗೆ ಹಲವು ಸ್ಟಾರ್ ಆಟಗಾರರು ಮಾತನಾಡಿದ್ದಾರೆ. ಈಗ ವಿನೇಶ್ ವಿಚಾರವಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಹ ಮೌನ ಮುರಿದಿದ್ದಾರೆ.
ವಿನೇಶ್ ಪೋಗಟ್ ಅವರ ಅನರ್ಹತೆಯ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ನನಗೆ ನಿಖರವಾದ ನಿಯಮಗಳು ತಿಳಿದಿಲ್ಲ. ವಿನೇಶ್ ಫೈನಲ್‌ಗೆ ತಲುಪಿದಾಗ ಅವಳು ಅರ್ಹತೆ ಸರಿಯಾಗಿ ಇರಬೇಕು ಎಂಬುದರ ಬಗ್ಗೆ ಖಾತ್ರಿ ಇದೆ. ಅವರನ್ನು ಅನ್ಯಾಯವಾಗಿ ಅನರ್ಹಗೊಳಿಸಲಾಗಿದೆಯಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ನನ್ನ ಅನಿಸಿಕೆ ಪ್ರಕಾರ ಅವಳು ಬೆಳ್ಳಿ ಪದಕಕ್ಕೆ ಅರ್ಹಳು ಎಂದು ತಿಳಿಸಿದ್ದಾರೆ.

ವಿನೇಶ್ ಪೋಗಟ್ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಆಡಿದ ಧಾಟಿಯನ್ನು ನೋಡಿದರೆ, ಅವರು ಚಿನ್ನದ ಪದಕದ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಅಲ್ಲದೆ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಫೈನಲ್ ಪ್ರವೇಶಿಸಿದ ಮೊದಲ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದರು. ಆದರೆ, 100 ಗ್ರಾಮ್ ತೂಕ ಹೆಚ್ಚಾಗಿದ್ದರಿಂದ ಅವರನ್ನು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಲಾಯಿತು.
ವಿನೇಶ್ ಫೋಗಟ್ ಅವರ ಪ್ರದರ್ಶನವನ್ನು ನೋಡಿದರೆ, ಅವರು ಚಿನ್ನದ ಪದಕಕ್ಕೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟರು. ಆದರೆ, ಅಂತಿಮ ದಿನದಂದು ಆಕೆ ಅಧಿಕ ತೂಕದ ಕಾರಣದಿಂದ ಅನರ್ಹಗೊಂಡರು. 50 ಕೆಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಚಿನ್ನ ಗೆಲ್ಲುವುದು ಖಚಿತ ಎಂದು ಪರಿಗಣಿಸಲಾಗಿತ್ತು. ಆದರೆ, 100 ಗ್ರಾಂ ಅಧಿಕ ತೂಕ ಹೊಂದಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು.

ವಿನೇಶ್ ಪೋಗಟ್ ಅವರು ತಮ್ಮ ಮೇಲಿನ ಅನರ್ಹತೆ ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿನೇಶ್ ಮನವಿ ಸಲ್ಲಿಸಿದ್ದರು. ತಮಗೆ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಕೋರ್ಟ್‌ಗೆ ವಿನೇಶ್ ಕೇಳಿಕೊಂಡಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನಡೆಸಿರುವ ಕೋರ್ಟ್ ಈ ಬಗ್ಗೆ ತೀರ್ಪನ್ನು ಭಾನುವಾರ ನೀಡಲಿದೆ.
ವಿನೇಶ್ ಪೋಗಟ್ ಅವರ ಪರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬ್ಯಾಟ್ ಬೀಸಿದ್ದಾರೆ. ವಿನೇಶ್ ಪೋಗಟ್ ಸೆಮಿಫೈನಲ್ ವರೆಗಿನ ಪಂದ್ಯವನ್ನು ಗೆದ್ದು ಕೊಂಡಿದ್ದಾರೆ ಹೀಗಾಗಿ ಅವರು ಪದಕಕ್ಕೆ ಅರ್ಹರು ಎಂದು ಸಚಿನ್ ಹೇಳಿದ್ದಾರೆ.