ಗಂಗೂಲಿ-ದ್ರಾವಿಡ್ ದಾಖಲೆ ಮುರಿದ ಕೌಂಟಿ ಕ್ರಿಕೆಟರ್ಸ್
ಲಂಡನ್, ಜೂನ್ 07: ಕ್ರಿಕೆಟ್ ದಿಗ್ಗಜರಾದ ಭಾರತದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ಅತ್ಯಧಿಕ ರನ್ ಜೊತೆಯಾಟದ ದಾಖಲೆಯನ್ನು ಕೌಂಟಿ ಕ್ರಿಕೆಟರ್ಸ್ ಜೋಡಿ ಮುರಿದಿದೆ.
ಇಂಗ್ಲೀಷ್ ಕೌಂಟಿಯ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ನಾಟಿಂಗ್ಹ್ಯಾಮ್ ಶೈರ್ ತಂಡದ ರಿಕಿವೆಸ್ಲೆಸ್ ಹಾಗೂ ಮೈಕಲ್ ಲಂಬ್ ಈ ಸಾಧನೆ ಮಾಡಿದ್ದಾರೆ. [ದ್ರಾವಿಡ್ ಕೋಚಿಂಗ್ ಪಡೆದ ತಂಡದಿಂದ ಆಸೀಸ್ ಪ್ರವಾಸ]
ಈ ಜೋಡಿ 39.2 ಓವರ್ಗೆ 342ರನ್ಗಳ ಭರ್ಜರಿ ಜತೆಯಾಟ ಗಳಿಸಿದೆ. ಈ ಮೂಲಕ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಟ್ರೆಂಟ್ ಬಿಡ್ಜ್ ನಲ್ಲಿ ನಡೆದ ನಾಟ್ಸ್ ಹಾಗೂ ನಾಟಿಂಗ್ಹ್ಯಾಮ್ ಶೈರ್ ತಂಡದ ನಡುವಿನ ಪ್ರಥಮ ದರ್ಜೆ ಪಂದ್ಯದಲ್ಲಿ ಈ ದಾಖಲೆಯ ಜೊತೆಯಾಟ ಕಂಡು ಬಂದಿದೆ.[ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆ ಬೇಡವೆನ್ನಲು ಕಾರಣವಿದೆ!]
ರಿಕಿವೆಸ್ಲೆಸ್ ಅವರು 97 ಎಸೆತದಲ್ಲಿ 146 ರನ್ ಗಳಿಸಿದರೆ, ಮೈಕಲ್ ಲಂಬ್ ದಾಖಲೆಯ 184 ರನ್ಚೆಚ್ಚಿದರು. ಇವರಿಬ್ಬರ ಆಟದ ನೆರವಿನಿಂದ ನಾಟಿಂಗ್ಹ್ಯಾಮ್ ಶೈರ್ ತಂಡ ಎಂಟು ವಿಕೆಟ್ ನಷ್ಟಕ್ಕೆ 445 ರನ್ ಗಳಿಸಿತು.

ಈ ಬೃಹತ್ ಸವಾಲು ಬೆನ್ನತ್ತಿದ ನಾಟ್ಸ್ ಕೂಡಾ ಉತ್ತಮ ಪ್ರದರ್ಶನ ನೀಡಿ 425 ರನ್ ಗಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂಗ್ಲೆಂಡಿನಲ್ಲಿ 1999ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 318 ರನ್ಗಳ ಜತೆಯಾಟ ಸಾಧಿಸಿ ದಾಖಲೆ ಬರೆದಿದ್ದರು.
ಆದರೆ, ಲಿಸ್ಟ್ ಎ ಪಂದ್ಯಗಳ ಪೈಕಿ ಲಂಬ್ ಹಾಗೂ ವೆಸ್ಲೆಸ್ ಅವರ ದಾಖಲೆ ಜೊತೆಯಾಟ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ. ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯಲ್ಸ್ ಅವರು ವಿಶ್ವಕಪ್ 2015 ರಲ್ಲಿ ಜಿಂಬಾಬ್ವೆ ವಿರುದ್ಧ 372 ರನ್ ಗಳಿಸಿದ್ದರು. ಆದರೆ, ಅತ್ಯಧಿಕ ರನ್ ಜೊತೆಯಾಟ ಸರೆ(496/4) ಹಾಗೂ ಗೌಸೆಸ್ಟರ್ ಶೈರ್ ವಿರುದ್ಧ 2007ರಲ್ಲಿ ಕಂಡು ಬಂದಿತ್ತು. (ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications