ಬಿಸಿಸಿಐ ಹೊಸ 7 ಸದಸ್ಯರ ಸಮಿತಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನ
ನವದೆಹಲಿ, ಜೂನ್ 28 : ನಿವೃತ್ತ ನ್ಯಾಯ ಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಮುಂದಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ವಿಶೇಷ ಸಮಿತಿಯನ್ನು ರಚಿಸಿದೆ.
ಏಳು ಸದಸ್ಯರ ಈ ಸಮಿತಿಗೆ ಬಿಸಿಸಿಐನ ಹಿರಿಯ ಆಡಳಿತಗಾರ ರಾಜೀವ್ ಶುಕ್ಲಾ ಅವರು ಅಧ್ಯಕ್ಷರಾಗಿದ್ದಾರೆ. ಹಾಗೂ ಸಮಿತಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಸ್ಥಾನ ನೀಡಲಾಗಿದೆ.

ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಟಿ.ಸಿ. ಮ್ಯಾಥ್ಯೂ, ಮೇಘಾಲಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ನಬಾ ಭಟ್ಟಾ ಚಾರ್ಜಿ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ಮತ್ತು ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರೂ ಸಮಿತಿ ಯಲ್ಲಿದ್ದಾರೆ. ಅನಿರುದ್ಧ್ ಮತ್ತು ಅಮಿತಾಭ್ ಅವರು ಸಮಿತಿಯ ಸಂಚಾಲಕರಾಗಿದ್ದಾರೆ.
'ಜುಲೈ 14 ರಂದು ನಡೆಯುವ ವಿಚಾರಣೆಯ ವೇಳೆ ನಾವು ಲೋಧಾ ಶಿಫಾರಸುಗಳ ಅನುಷ್ಠಾನಕ್ಕೆ ಕೈಗೊಂಡಿ ರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ವರದಿ ನೀಡಬೇಕು.
ಶುಕ್ಲಾ ನೇತೃತ್ವದ ಸಮಿತಿಯು ಶಿಫಾರಸುಗಳನ್ನು ಜಾರಿಗೊಳಿಸಲು ತೊಡಕಾಗಿರುವ ಅಂಶ ಗಳನ್ನು ಪತ್ತೆ ಹಚ್ಚಿ ಜುಲೈ 10ರ ಒಳಗೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರಿಗೆ ಲಿಖಿತ ವರದಿ ನೀಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications