ಕಳೆದ 2022ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ನಂತರ, ಭಾರತೀಯ ಕ್ರಿಕೆಟ್ ಆಯ್ಕೆಗಾರರು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದಾರೆ. ಇದೇ ವೇಳೆ ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು ಟಿ20 ಕ್ರಿಕೆಟ್‌ನಿಂದ ದೂರವಿಡಲಾಗುತ್ತದೆ ಎಂದು ವರದಿಯಾಗಿದೆ.
ಇದಕ್ಕೆ ಪೂರಕವೆಂಬಂತೆ ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆಗಾರರು ಮತ್ತೊಮ್ಮೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಯುವ ತಂಡವನ್ನು ಆಯ್ಕೆ ಮಾಡಿದರು. ಏಕೆಂದರೆ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಆಯ್ಕೆಯಾಗಲಿಲ್ಲ.

2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಹಿರಿಯ ಆಟಗಾರರ ಕೆಲಸದ ಹೊರೆಯನ್ನು ನಿರ್ವಹಿಸುವುದು ಮುಖ್ಯ ಗುರಿಯಾಗಿದೆ. ಆದರೆ ಟಿ20 ಕ್ರಿಕೆಟ್‌ಗೆ ರಚನೆಯನ್ನು ಹಾಕದ ಕಾರಣ ಬಿಸಿಸಿಐ ಮಾರ್ಗಸೂಚಿ ಇನ್ನೂ ಸ್ಪಷ್ಟವಾಗಿಲ್ಲ.
ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಪ್ರಕಾರ, ವಿರಾಟ್ ಮತ್ತು ರೋಹಿತ್ ಇಬ್ಬರೂ ಟಿ20 ಸ್ವರೂಪದಲ್ಲಿ ಉತ್ತಮವಾಗಿ ಆಡುತ್ತಿರುವುದರಿಂದ ಇಬ್ಬರೂ ತಂಡಗಳ ಯೋಜನೆಯ ಭಾಗವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರ ಉತ್ತಮ ಫಾರ್ಮ್‌ನಲ್ಲಿದ್ದರು. ಆದ್ದರಿಂದ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಏಕೆ ಯಶಸ್ವಿಯಾಗುವುದಿಲ್ಲ ಎಂದು ಬಿಸಿಸಿಐ ಆಯ್ಕೆಗಾಗರರಿಗೆ ಖಚಿತವಾಗಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದರು.

"ನಿಮ್ಮ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ, ಅವರು ಯಾರೆಂಬುದು ವಿಷಯವಲ್ಲ. ನನ್ನ ಅಭಿಪ್ರಾಯದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಇನ್ನೂ ಟಿ20 ಕ್ರಿಕೆಟ್‌ನಲ್ಲಿ ಸ್ಥಾನವನ್ನು ಹೊಂದಿದ್ದಾರೆ".
"ವಿರಾಟ್ ಕೊಹ್ಲಿ ಮತ್ತು ರೋಹಿತ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಏಕೆ ಆಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿಲ್ಲ. ಕೊಹ್ಲಿ ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ನನ್ನನ್ನು ಕೇಳಿದರೆ ಇಬ್ಬರೂ ಟಿ20 ಕ್ರಿಕೆಟ್‌ನಲ್ಲಿ ಸ್ಥಾನ ಪಡೆದಿದ್ದಾರೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಋತುವಿನ ನಂತರ, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್ ಮತ್ತು ಜಿತೇಶ್ ಶರ್ಮಾ ಐದು ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸುವ ನಿರೀಕ್ಷೆಯಿತ್ತು.
ಆದರೆ, 15 ಸದಸ್ಯರ ತಂಡದಲ್ಲಿ ಮೂವರಲ್ಲಿ ಯಾರಿಗೂ ಸ್ಥಾನ ಸಿಗಲಿಲ್ಲ. ಇದೇ ವೇಳೆ ಮಾತನಾಡಿದ ಸೌರವ್ ಗಂಗೂಲಿ, ಅವರು ಉತ್ತಮ ಪ್ರದರ್ಶನ ಮುಂದುವರಿಸಿದರೆ, ಶೀಘ್ರದಲ್ಲೇ ಭಾರತ ಹಿರಿಯರ ತಂಡದಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
"ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್ ಮತ್ತು ಜಿತೇಶ್ ಶರ್ಮಾ ಅವರು ಆಡುತ್ತಲೇ ಇರಬೇಕಾಗುತ್ತದೆ. ಅವರು ಸಿಕ್ಕ ಅವಕಾಶಗಳಲ್ಲಿ ಪ್ರದರ್ಶನವನ್ನು ಮುಂದುವರಿಸಬೇಕು. ಇದು ಎಲ್ಲಾ ಸಮಯದಲ್ಲೂ ನಡೆಯುತ್ತದೆ. ತಂಡದಲ್ಲಿ 15 ಮಂದಿಯನ್ನು ಮಾತ್ರ ಆಯ್ಕೆ ಮಾಡಬಹುದು ಮತ್ತು 11 ಆಟಗಾರರು ಆಡುತ್ತಾರೆ. ಆದ್ದರಿಂದ, ಯಾರಾದರೂ ತಪ್ಪಿಸಿಕೊಳ್ಳಬೇಕು. ಅವರ ಸಮಯವೂ ಬರಲಿದೆ ಎಂದು ನನಗೆ ಖಚಿತವಿದೆ," ಎಂದು ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದರು.