ಇದೇ ಕಾರಣಕ್ಕೆ ಐಪಿಎಲ್ ಶ್ರೇಷ್ಠ ಕ್ರಿಕೆಟ್ ಲೀಗ್: ಸೌರವ್ ಗಂಗೂಲಿ

ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ರೋಚಕ ಕದನದ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಐಪಿಎಲ್ ಯಾಕೆ ವಿಶ್ವದ ಎಲ್ಲಾ ಕ್ರಿಕೆಟ್ ಲೀಗ್‌ಗಳಿಗಿಂತ ಶ್ರೇಷ್ಠ ಲೀಗ್ ಎಂದು ಮತ್ತೊಮ್ಮೆ ಸಾಭೀತಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ "ಎಂತಾ ಅದ್ಭುತವಾದ ಪ್ರದರ್ಶನ. ಇದೇ ಕಾರಣಕ್ಕೆ ಐಪಿಎಲ್ ವಿಶ್ವದ ಶ್ರೇಷ್ಠ ಕ್ರಿಕೆಟ್ ಲೀಗ್ ಎನಿಸಿದೆ. ಅದ್ಭುತವಾದ ಪ್ರತಿಭೆಯ ಪ್ರದರ್ಶನ" ಎಂದು ಸೌರವ್ ಗಂಗೂಲಿ ಹೆಮ್ಮೆಯ ಮಾತುಗಳನ್ನು ಹೇಳಿ ಟ್ವೀಟ್ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಂತಿಮ 18 ಎಸೆತಗಳಲ್ಲಿ 51 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ರಾಹುಲ್ ತೆವಾಟಿಯಾ ಅಮೋಘ ಪ್ರದರ್ಶನದ ನೀಡಿದರು. 18ನೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ 30 ರನ್ ದೋಚಿ ರೋಚಕ ತಿರುವು ನೀಡಿದರು.
ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ನೀಡಿದ 224 ರನ್‌ಗಳ ಗುರಿಯನ್ನು ಇನ್ನೂ ಮೂರು ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚಿನ ರನ್ ಬೆನ್ನಟ್ಟಿ ಗೆದ್ದ ದಾಖಲೆಯನ್ನು ರಾಜಸ್ಥಾನ್ ರಾಯಲ್ಸ್ ತನ್ನ ಹೆಸರಿಗೆ ಬರೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications