Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sourav Ganguly: ಚಿಕ್ಕ ಪರದೆಯಲ್ಲಿ ಇನ್ಮುಂದೆ 'ದಾದಾ' ಗಿರಿ ಆರಂಭ

ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ನಾಯಕರಲ್ಲಿ ಸೌರವ್ ಗಂಗೂಲಿ ಒಬ್ಬರು. ಸುಮಾರು 25 ವರ್ಷಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ ಪಾತಾಳಕ್ಕೆ ಕುಸಿದ ಭಾರತ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಗಂಗೂಲಿ ಪ್ರಮುಖ ಪಾತ್ರವಹಿಸಿದ್ದರು. ವಿಶ್ವಕಪ್ ಗೆಲ್ಲದ ಹೊರತಾಗಿಯೂ ಸೌರವ್‌ ಗಂಗೂಲಿ ಹೆಸರು ಭಾರತೀಕಯ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ಆಕ್ರಮಣಕಾರಿ ಆಟದಿಂದ ಗುರುತಿಸಿಕೊಂಡಿದ್ದ ಗಂಗೂಲಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ 'ದಾದಾ' ಆಗಿ ಉಳಿದಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಹೀರೋ ಆಗಿ ಮಿಂಚಿದ್ದ ದಿಗ್ಗಜ ನಾಯಕ ಸೌರವ್ ಗಂಗೂಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಮೈದಾನದಿಂದ ದೂರ ಉಳಿದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದ ಸೌರವ್ ಗಂಗೂಲಿ ಇನ್ನು ಮುಂದೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರನ್ನು ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

Sourav Ganguly ready to act in Bengali language web series

ಸೌರವ್ ಗಂಗೂಲಿ ಬೆಂಗಾಲಿ ಭಾಷೆಯ 'ಖಾಕಿ-2' ಎಂಬ ವೆಬ್ ಸಿರೀಸ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಈ ಫೋಟೋಗಳನ್ನು ನೋಡಿದ ಕ್ರಿಕೆಟ್ ಅಭಿಮಾನಗಳು ಗಂಗೂಲಿ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ. ಪಶ್ಚಿಮಬಂಗಾಳದ ಬರೂಯಿಪುರದಲ್ಲಿರುವ ವಿನೋದಿನಿ ಸ್ಟುಡಿಯೋದಲ್ಲಿ ವೆಬ್‌ ಸೀರಿಸ್ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದರು ಎಂದು ವರದಿಗಳಾಗಿವೆ.

ಖಾಕಿ-2 ವೆಬ್​ ಸಿರೀಸ್‌​ನಲ್ಲಿ ಬಂಗಾಳಿ ಚಿತ್ರರಂಗದ ಅನೇಕ ತಾರೆಯರು ನಟಿಸಿದ್ದಾರೆ. ಪ್ರೊಸೇನ್‌ಜಿತ್ ಚಟರ್ಜಿ, ಜೀತ್, ಪರಂಬ್ರತ ಚಟರ್ಜಿ ಮತ್ತು ಶಾಶ್ವತಾ ಚಟರ್ಜಿ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಖಾಕಿ 2 ರ ಜಾಹೀರಾತನ್ನು ಶ್ರೀ ವೆಂಕಟೇಶ್ ಫಿಲ್ಮ್ಸ್ ನಿರ್ಮಿಸಿದೆ.

ಬುಧವಾರ ಕೋಲ್ಕತ್ತಾದಲ್ಲಿ ನಡೆದ ಖಾಕಿ-2 ವೆಬ್​ ಸಿರೀಸ್‌ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ನೀರಜ್ ಪಾಂಡೆ ಅವರು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಈ ಸಿರೀಸ್‌​ನಲ್ಲಿ ಸೌರವ್​ ಗಂಗೂಲಿ ನಟಿಸಿದ್ದಾರಾ? ಇಲ್ಲವಾ? ಎಂಬುದರ ಸ್ಪಷ್ಟಪಡಿಸಿಲ್ಲ. ವೆಬ್‌ ಸೀರಿಸ್‌ನಲ್ಲಿ ಗಂಗೂಲಿ ಇರುವುದನ್ನು ನೀವು ತೆರೆಯ ಮೇಲೆಯೇ ನೋಡಬೇಕು ಎಂದು ಹೇಳಿ ನಸುನಕ್ಕಿದ್ದಾರೆ. ಖಾಕಿ-2 ವೆಬ್​ ​ಸಿರೀಸ್​​ ಮಾರ್ಚ್​ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದ್ದು, ಸೀರಿಸ್‌ನ ಪ್ರೋಮೋಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Story first published: Friday, March 7, 2025, 10:43 [IST]
Other articles published on Mar 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+