ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ವಿರುದ್ಧದ ಐತಿಹಾಸಿಕ ಕೊಲ್ಕತ್ತಾ ಗೆಲುವಿನ ಡ್ರೆಸ್ಸಿಂಗ್ ರೂಮ್ ಸಂಭ್ರಮವನ್ನು ಹಂಚಿಕೊಂಡ ಗಂಗೂಲಿ: ವಿಡಿಯೋ

Sourav Ganguly Recalls Dressing Room Celebration Of Historical Victory

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಟೀಮ್ ಇಂಡಿಯಾಗೆ 2001ರ ಕೊಲ್ಕತ್ತಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಅತ್ಯಂತ ಸ್ಮರಣೀಯ. ಮೊದಲ ಇನ್ನಿಂಗ್ಸ್‌ನಲ್ಲಿ ಹೀನಾಯವಾಗಿ ಪ್ರದರ್ಶನದ ಬಳಿಕ ತಿರುಗಿ ಬಿದ್ದು ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಪಂದ್ಯವನ್ನು ಭಾರತ ಗೆದ್ದು ಕೊಂಡಿತ್ತು.

ಆ ಅಮೋಘ ಗೆಲುವಿನ ಸಂಭ್ರಮದ ವೀಡಿಯೋ ತುಣುಕನ್ನು ಸೌರವ್ ಗಂಗೂಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ "ಎಂತಾ ಗೆಲುವು" ಎಂದು ಗಂಗೂಲಿ ಬರೆದುಕೊಂಡಿದ್ದಾರೆ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಶಾಂಪೇನ್ ಬಾಟಲ್‌ನ್ನು ಹಿಡಿದು ಸಂಭ್ರಮಿಸಿದ ಕ್ಷಣ ಈ ವಿಡಿಯೋದಲ್ಲಿದೆ.

ಆ ಐತಿಹಾಸಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 445 ರನ್ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 171 ರನ್‌ಗಳಿಗೆ ಆಲೌಟ್‌ ಆಗಿ ಫಾಲೋಆನ್ ಅವಮಾನಕ್ಕೀಡಾಯಿತು. ಹೀಗಾಗಿ ಮತ್ತೆ ಟೀಮ್ ಇಂಡಿಯಾ ಬ್ಯಾಟಿಂಗ್ ಇಳಿಯಿತು.

ಎರಡನೇ ಇನ್ನಿಂಗ್ಸ್ ಮಾತ್ರ ಆಸಿಸ್ ಪಾಲಿಗೆ ನಿಜಕ್ಕೂ ಭಯಾನಕವಾಗಿತ್ತು. ಮೊದಲ ಇನ್ನಿಂಗ್ಸನಲ್ಲಿ ಬೇಗನೆ ಕಟ್ಟಹಾಕುವಲ್ಲಿ ಯಶಸ್ವಿಯಾಗಿದ್ದ ಆಸಿಸ್ ಬೌಲರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆಯಲು ಪರದಾಡಿದರು. ಅದರಲ್ಲೂ ಲಕ್ಷ್ಮಣ್ ಮತ್ತು ದ್ರಾವಿಡ್ ಆಸಿಸ್ ಬೌಲರ್‌ಗಳಿಗೆ ಅಕ್ಷರಶಃ ನರಕವನ್ನು ತೋರಿಸಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ ದ್ರಾವಿಡ್ 180 ರನ್ ಗಳಿಸಿದರೆ ವಿವಿಎಸ್ ಲಕ್ಷ್ಮಣ್ ಬರೊಬ್ಬರಿ 281 ರನ್ ಗಳಿಸಿದರು. ಈ ಮೂಲಕ 7ವಿಕೆಟ್ ಕಳೆದುಕೊಂಡು 657 ರನ್‌ಗಳಿಸಿ ಭಾರತ ಡಿಕ್ಲೇರ್ ಮಾಡಿಕೊಂಡಿತ್ತು. ಇದನ್ನು ಬೆನ್ನತ್ತಲು ಆಸ್ಟ್ರೇಲಿಯಾ ಕಣಕ್ಕಿಳಿಯಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಆಸಿಸ್ ಪತರಗುಟ್ಟಿಹೋಯಿತು. ಕೇವಲ 212 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಗಿ ಮುಖಭಂಗಕ್ಕೀಡಾಯಿತು. ಭಾರತದ ಪರ ಹರ್ಭಜನ್ ಸಿಂಗ್ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಿತ್ತು ಮಿಂಚಿದರು.

Story first published: Wednesday, April 15, 2020, 20:29 [IST]
Other articles published on Apr 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X