ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸೂಪರ್ ಸೀರೀಸ್' ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!

Sourav Ganguly reveals Super Series plan with England and Australia

ನವದೆಹಲಿ, ಡಿಸೆಂಬರ್ 25: ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಇನ್ನೊಂದು ತಂಡ ಸೇರಿ ವಿಶೇಷ ಟೂರ್ನಿಯೊಂದನ್ನು ನಡೆಸಲು ಉದ್ದೇಶಿಸಲಾಗಿದೆ. ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ದೊರೆತಿರುವ ಮಾಹಿತಿಯಂತೆ ಉದ್ದೇಶಿತ ಈ ಟೂರ್ನಿ 2021ರ ಬಳಿಕ ನಡೆಯಲಿದೆ. ನಿಯಮಿತ ಓವರ್‌ಗಳ ಅಂದರೆ 50 ಓವರ್‌ಗಳ ಟೂರ್ನಿ ಇದಾಗಿರಲಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 4 ರಾಷ್ಟ್ರಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಅರಂಭಿಕ ಟೂರ್ನಿ ಭಾರತದಲ್ಲೇ ನಡೆಯಲಿದೆ.

ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!

ಟೂರ್ನಿಗೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಸರತಿಯಂತೆ ಒಂದೊಂದೇ ರಾಷ್ಟ್ರಗಳು ಪ್ರತೀವರ್ಷ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿವೆ. ಈ ಟೂರ್ನಿ, ಐಸಿಸಿಯ ಆಶಯಗಳಿಗೆ ವಿರುದ್ಧವಾಗಿ ನಡೆಯಬಹುದು-ಆದರೆ ಈ ವರ್ಷದ ಆರಂಭದಲ್ಲೇ ಸದಸ್ಯ ರಾಷ್ಟ್ರಗಳು ತಾತ್ವಿಕವಾಗಿ ಈ ಟೂರ್ನಿಗೆ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ.

'ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ವಿಶ್ವದ ಇನ್ನೊಂದು ಟಾಪ್ ತಂಡ 2021ರಿಂದ ಆರಂಭಗೊಳ್ಳಲಿರುವ ಸೂಪರ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿಯ ಮೊದಲ ಆವೃತ್ತಿ ಭಾರತದಲ್ಲಿ ನಡೆಯಲಿದೆ,' ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ, ಈ ಉದ್ದೇಶಿತ ಟೂರ್ನಿಗೆ ಕೆಲವರು ಟೀಕೆಯೂ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಫ್ಯಾಂಟಸಿ ತಂಡ ಪ್ರಕಟಿಸಿದ ಗಂಗೂಲಿ; ಧೋನಿಗೆ ಸ್ಥಾನವಿಲ್ಲಐಪಿಎಲ್ ಫ್ಯಾಂಟಸಿ ತಂಡ ಪ್ರಕಟಿಸಿದ ಗಂಗೂಲಿ; ಧೋನಿಗೆ ಸ್ಥಾನವಿಲ್ಲ

ಅಕ್ಟೋಬರ್/ನವೆಂಬರ್‌ನಲ್ಲಿ ಈ ಟೂರ್ನಿ ಭಾರತದಲ್ಲಿ ನಡೆಯಲು ಉದ್ದೇಶಿಸಿದ್ದರೆ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ, ಅಕ್ಟೋಬರ್/ನವೆಂಬರ್ ಅಥವಾ ಫೆಬ್ರವರಿ/ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಪಂದ್ಯಾಟ ನಡೆಸಲು ಸದ್ಯಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Story first published: Wednesday, December 25, 2019, 13:49 [IST]
Other articles published on Dec 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X