ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ: ಗ್ರೇಮ್ ಸ್ಮಿತ್

Sourav Ganguly Right Person For ICC Chief: Graeme Smith

ಕೇಪ್‌ ಟೌನ್, ಮೇ 21: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರ ಸ್ಥಾನಕ್ಕೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸರಿಯಾದ ವ್ಯಕ್ತಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ನಿರ್ದೇಶಕ, ಮಾಜಿ ಬ್ಯಾಟ್ಸ್‌ಮನ್ ಗ್ರೇಮ್ ಸ್ಮಿತ್ ಹೇಳಿದ್ದಾರೆ. ಸದ್ಯ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷರಾಗಿರುವ ಗಂಗೂಲಿಗೆ ಐಸಿಸಿ ಮುಖ್ಯಸ್ಥರಾಗುವ ಅರ್ಹತೆಯಿದೆ ಎಂದು ಸ್ಮಿತ್ ಅಭಿಪ್ರಾಯಿಸಿದ್ದಾರೆ.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಕೊರೊನಾವೈರಸ್‌ನಿಂದ ಕ್ರಿಕೆಟ್ ಸೇರಿದಂತೆ ವಿಶ್ವದ ಎಲ್ಲಾ ಕ್ರೀಡಾ ಸ್ಪರ್ಧೆಗಳು ರದ್ದು ಇಲ್ಲವೆ ಮುಂದೂಲ್ಪಟ್ಟಿವೆ. ಇನ್ನು ಕೆಲ ದಿನಗಳಲ್ಲಿ ಒಂದೊಂದಾಗಿ ಕ್ರೀಡಾಸ್ಪರ್ಧೆಗಳು ಆರಂಭಗೊಳ್ಳುವುದರಲ್ಲಿದೆ. ಇಂಥ ಸಂದರ್ಭದಲ್ಲಿ ಅಂದರೆ ಕೊರೊನಾ ಸುಧಾರಿಸಿದ ಬಳಿಕ ಪ್ರಮುಖ ಕ್ರಿಕೆಟ್‌ನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಗಂಗೂಲಿಯಂತವರ ಅಗತ್ಯವಿದೆ ಎಂದು ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

'ಸರಿಯಾದ ವ್ಯಕ್ತಿ ಐಸಿಸಿ ಮುನ್ನಡೆಸೋದು ಬಹುಮುಖ್ಯವಾಗಿದೆ. ಕೊರೊನಾವೈರಸ್ ಬಳಿಕ ಬಲಿಷ್ಠ ನಾಯಕನ ಅಗತ್ಯ ಕ್ರಿಕೆಟ್‌ಗಿದೆ. ಹೀಗಾಗಿ ಆಧುನಿಕ ಕ್ರಿಕೆಟ್‌ ಬಗ್ಗೆ ಅರಿವಿರುವ ಮತ್ತು ನಾಯಕತ್ವದ ಬಗ್ಗೆ ಜ್ಞಾನವಿರುವ ಸರಿಯಾದ ವ್ಯಕ್ತಿಗಳು ಕ್ರಿಕೆಟ್‌ ಮುನ್ನಡೆಸಬೇಕಿದೆ. ಇದಕ್ಕೆ ಗಂಗೂಲಿ ಸೂಕ್ತ,' ಎಂದು ಸ್ಮಿತ್ ವಿವರಿಸಿದ್ದಾರೆ.

ಟಿ20 ಸರಣಿಗಾಗಿ ಆಗಸ್ಟ್‌ನಲ್ಲಿ ಆಫ್ರಿಕಾಗೆ ಟೀಮ್ ಇಂಡಿಯಾ ಪ್ರವಾಸ ? : ವರದಿಟಿ20 ಸರಣಿಗಾಗಿ ಆಗಸ್ಟ್‌ನಲ್ಲಿ ಆಫ್ರಿಕಾಗೆ ಟೀಮ್ ಇಂಡಿಯಾ ಪ್ರವಾಸ ? : ವರದಿ

ಟೆಲಿ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಗ್ರೇಮ್ ಸ್ಮಿತ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಭಾರತದ ಶಶಾಂಕ್ ಮನೋಹರ್, ತನ್ನ ಅವಧಿ ಮುಗಿದ ಬಳಿಕ ತಾನು ಮರು ಆಯ್ಕೆಯತ್ತ ಆಸಕ್ತಿ ಹೊಂದಿಲ್ಲ ಎಂದು ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಮನೋಹರ್ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ.

Story first published: Thursday, May 21, 2020, 19:19 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X