Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಗೂಲಿ ವಿಶ್ವಕಪ್ ತಂಡದಲ್ಲಿ ಉತ್ತಪ್ಪ, ಬಿನ್ನಿ

ಬೆಂಗಳೂರು, ಸೆ.8: ಇಂಗ್ಲೆಂಡ್ ಪ್ರವಾಸವನ್ನು ಸೋಲಿನ ಮೂಲಕ ಕೊನೆಗಾಣಿಸಿದ ಎಂಎಸ್ ಧೋನಿ ವಿರುದ್ದ ಗರಂ ಆಗಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಮುಂದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆ ಮಾಡಿದ್ದಾರೆ. ಐಸಿಸಿ ವಿಶ್ವಕಪ್ 2015ಕ್ಕೆ ಗಂಗೂಲಿ ಆಯ್ಕೆ ಮಾಡಿರುವ 30 ಮಂದಿ ತಂಡದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ಸ್ಟುವರ್ಟ್ ಬಿನ್ನಿ ಅವರಿಗೂ ಸ್ಥಾನ ನೀಡಿದ್ದಾರೆ.

ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಮುಕ್ತಾಯವಾಗುತ್ತಿದ್ದಂತೆ ಸೌರವ್ ಗಂಗೂಲಿ ಅವರು 30 ಮಂದಿ ಆಟಗಾರರ ಪಟ್ಟಿಯನ್ನು ಸ್ಟಾರ್ ಸ್ಫೋರ್ಟ್ಸ್ ಗಾಗಿ ಆಯ್ಕೆ ಮಾಡಿದ್ದಾರೆ. ಗಂಗೂಲಿ ಅವರ ತಂಡದಲ್ಲಿ 13 ಜನ ಬ್ಯಾಟ್ಸ್ ಮನ್, 9 ಜನ ವೇಗಿಗಳು, 3 ಸ್ಪಿನ್ನರ್ಸ್, 3 ವಿಕೆಟ್ ಕೀಪರ್ಸ್, 3 ಜನ ಆಲ್ ರೌಂಡರ್ಸ್ ಇದ್ದಾರೆ.

ಐಸಿಐ ವಿಶ್ವಕಪ್ 2015 ಪಂದ್ಯಾವಳಿಗಳು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14 ರಿಂದ ಮಾರ್ಚ್ 29ರ ತನಕ ನಡೆಯಲಿದೆ. ಈ ಬಾರಿ ಭಾರತದಿಂದ ತೆರಳಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಎರಡು ದೇಶಕ್ಕೆ ಸೇರಿಸಿ ಒಂದೇ ವೀಸಾ ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗುತ್ತಿರುವುದು ವಿಶೇಷ. ಗಂಗೂಲಿ ಅವರು ಆಯ್ಕೆ ಮಾಡಿರುವ ತಂಡದ ವಿವರ ಮುಂದೆ ನೋಡಿ

13 ಜನ ಬ್ಯಾಟ್ಸ್ ಮನ್ ಗಳು

13 ಜನ ಬ್ಯಾಟ್ಸ್ ಮನ್ ಗಳು

ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ಯುವರಾಜ್ ಸಿಂಗ್, ಮನೋಜ್ ತಿವಾರಿ, ರಾಬಿನ್ ಉಯ್ಯಪ್ಪ, ಗೌತಮ್ ಗಂಭೀರ್, ಕೆಎಲ್ ರಾಹುಲ್, ಮುರಳಿ ವಿಜಯ್, ಕೇದಾರ್ ಜಾಧವ್

9 ಫಾಸ್ಟ್ ಬೌಲರ್

9 ಫಾಸ್ಟ್ ಬೌಲರ್

ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ, ಧವಳ್ ಕುಲಕರ್ಣಿ, ಪಂಕಜ್ ಸಿಂಗ್, ವರುಣ್ ಅರೋನ್, ಜಹೀರ್ ಖಾನ್, ಮೋಹಿತ್ ಶರ್ಮ

2 ಸ್ಪಿನ್ನರ್ ಗಳು

2 ಸ್ಪಿನ್ನರ್ ಗಳು

ಆರ್ ಅಶ್ವಿನ್ ಹಾಗೂ ಕರಣ್ ಶರ್ಮ

3 ವಿಕೆಟ್ ಕೀಪರ್ಸ್

3 ವಿಕೆಟ್ ಕೀಪರ್ಸ್

ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ವೃದ್ಧಿಮಾನ್ ಸಹಾ

3 ಆಲ್ ರೌಂಡರ್ಸ್

3 ಆಲ್ ರೌಂಡರ್ಸ್

ಸ್ಟುವರ್ಟ್ ಬಿನ್ನಿ, ಅಕ್ಷರ್ ಪಟೇಲ್, ರವೀಂದ್ರ ಜಡೇಜ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+