For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫ್ಯಾಂಟಸಿ ತಂಡ ಪ್ರಕಟಿಸಿದ ಗಂಗೂಲಿ; ಧೋನಿಗೆ ಸ್ಥಾನವಿಲ್ಲ

Sourav Ganguly Selects His IPL Fantasy Team, Picks Himself As Captain

ಬಿಸಿಸಿಐ ಅಧ್ಯಕ್ಷ ಮಾಜಿ ನಾಯಕ ಸೌರವ್ ಗಂಗೂಲಿ ಐಪಿಎಲ್ ಫ್ಯಾಂಟಸಿ ತಂಡವನ್ನು ಪ್ರಕಟಿಸಿದ್ದಾರೆ. ಅಚ್ಚರಿಯೇನೆಂದರೆ ಐಪಿಎಲ್‌ನಲ್ಲಿ ಸಕ್ಸಸ್‌ಫುಲ್ ನಾಯಕರಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ತಂಡದಲ್ಲಿ ಸ್ಥಾನವನ್ನು ಪಡೆದಿಲ್ಲ.

ಸೌರವ್ ಗಂಗೂಲಿ ಹೆಸರಿರುವ ಈ ಫ್ಯಾಂಟಸಿ ತಂಡದ ನಾಯಕ ಸ್ವತಃ ಗಂಗೂಲಿಯೇ ವಹಿಸಿಕೊಂಡಿದ್ದಾರೆ. ವಿಕೆಟ್‌ ಕೀಪರ್‌ ಆಗಿ ಎಂಎಸ್ ಧೋನಿಯ ಬದಲಾಗಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆಯನ್ನೂ ನೀಡಿರುವ ಗಂಗೂಲಿ, 'ಇದೊಂದು ಸಂಫೂರ್ಣ ಮನರಂಜನೆ . ಪಂತ್ ಓರ್ವ ಯುವ ಆಟಗಾರ. ಎಲ್ಲರನ್ನೂ ಮನರಂಜಿಸುವ ಸಲುವಾಗಿಯಷ್ಟೇ ಈ ತಂಡ ಎಂದು ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂಬ ಮಾತನ್ನೂ ಈ ಸಂದರ್ಭದಲ್ಲಿ ಗಂಗೂಲಿ ಹೇಳಿದ್ದಾರೆ.

ಆರಂಭಿಕ ಆಟಗಾರರಾಗಿ ಗಂಗೂಲಿ ತಮ್ಮ ಜೊತೆಗೆ ರೋಹಿತ್ ಶರ್ಮಾ ಅವರನ್ನು ಆಯ್ದುಕೊಂಡಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಹಾಗು ಡೇವಿಡ್ ವಾರ್ನರ್ ಮುಂದಿನ ಕ್ರಮಾಂಕದಲ್ಲಿ ಆಡಲಿದ್ದಾರೆ. ಆಂದ್ರೆ ರಸೆಲ್ ಮತ್ತು ರಿಯಾನ್ ಪರಾಗ್ ಈ ತಂಡದ ಆಲ್‌ರೌಂಡರ್ ಆಗಿದ್ದಾರೆ. ಸ್ಪಿನ್ ವಿಭಾಗವನ್ನು ರವೀಂದ್ರ ಜಡೇಜಾ ಮಾತ್ರವೇ ಪ್ರತಿನಿಧಿಸುತ್ತಿದ್ದಾರೆ. ವೇಗಿಗಳಾಗಿ ಮಾರ್ಕಸ್ ಸ್ಟೋನಿಸ್, ಜೋಫ್ರಾ ಆರ್ಚರ್ ಮತ್ತು ಜಸ್ಪ್ರಿತ್ ಬೂಮ್ರಾ ತಂಡಲ್ಲಿದ್ದಾರೆ.

ಇದಕ್ಕೂ ಮುನ್ನ ಸೌರವ್ ಗಂಗೂಲಿ ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರ ಬ್ಯಾಟಿಂಗ್‌ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು. ಕಳೆದ ಬಾನುವಾರ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಅಂತಿಮ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲು ಉತ್ತಮ ಕೊಡುಗೆಯನ್ನು ನೀಡಿದ್ದರು. ನಾಯಕ ವಿರಾಟ್ ಕೊಹ್ಲಿಗೆ ಜಡೇಜಾ ಉತ್ತಮ ಸಾಥ್ ನೀಡಿದ್ದರು.

ಸೌರವ್ ಗಂಗೂಲಿ ಫ್ಯಾಂಟಸಿ ಐಪಿಎಲ್ XI: ಸೌರವ್ ಗಂಗೂಲಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ರಿಷಭ್ ಪಂತ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಜಸ್ಪ್ರೀತ್ ಬುಮ್ರಾ, ಮಾರ್ಕಸ್ ಸ್ಟೊಯ್ನಿಸ್ಸ್, ರಿಯಾನ್ ಪರಾಗ್, ಜೋಫ್ರಾ ಆರ್ಚರ್ ಮತ್ತು ರವೀಂದ್ರ ಜಡೇಜಾ.

Story first published: Tuesday, December 24, 2019, 16:16 [IST]
Other articles published on Dec 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+