ಬಿಸಿಸಿಐ ಅಧ್ಯಕ್ಷ ಪಟ್ಟ ಅಲಂಕರಿಸಿದ ಮಾಜಿ ನಾಯಕ ಸೌರವ್ ಗಂಗೂಲಿ

ನವದೆಹಲಿ, ಅಕ್ಟೋಬರ್ 23: ಭಾರತ ಕ್ರಿಕೆಟ್ ತಂಡದ ಜನಪ್ರಿಯ ನಾಯಕರಾಗಿದ್ದ ಸೌರವ್ ಗಂಗೂಲಿ ಇಂದು (ಅಕ್ಟೋಬರ್ 23) ಬಿಸಿಸಿಐ 39ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಸಮಿತಿಯ 33 ತಿಂಗಳ ಆಡಳಿತ ಅವಧಿ ಕೊನೆಗೊಳ್ಳಲಿದೆ.
ಬಂಗಾಳ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿಸಿಸಿಐ ಕಾರ್ಯದರ್ಶಿಯಾಗಿ ಗೃಹಸಚಿವ ಅಮಿತ್ ಶಾ ಅವರ ಪುತ್ರ ಜಯ ಶಾ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನು ಉತ್ತರಖಂಡ್‌ನ ಮಹಿಮ್ ವರ್ಮಾ ಉಪಾಧ್ಯಕ್ಷರಾಗಿ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.
ಬಿಸಿಸಿಐ ಮಾಜಿ ಅಧ್ಯಕ್ಷ ತಮ್ಮ ಅರುಣ್ ಧುಮಲ್ ಖಜಾಂಚಿಯಾಗಿ ಮತ್ತು ಕೇರಳದ ಜಯೇಶ್ ಜಾರ್ಜ್ ಸಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಗಂಗೂಲಿ ಅವರ ಅಧಿಕಾರವಧಿ ಜುಲೈ ತಿಂಗಳವರೆಗೆ ಅಂದರೆ, ಸುಮಾರು 9 ತಿಂಗಳ ಕಾಲ ಇರಲಿದೆ.
ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಗಂಗೂಲಿ, ಇಲ್ಲೂ ಅನುಭವಗಳನ್ನು ಬಳಸಿಕೊಳ್ಳಲಿದ್ದಾರೆ. ಗಂಗೂಲಿ 300 ಏಕದಿನ ಇನ್ನಿಂಗ್ಸ್‌ಗಳಲ್ಲಿ 11363 ರನ್ ಬಾರಿಸಿದ್ದರು. ಇದರಲ್ಲಿ 22 ಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications