ಬಿಸಿಸಿಐ ಅಧ್ಯಕ್ಷ ಹುದ್ದೆಗೆ ರೋಜರ್ ಬಿನ್ನಿ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ

ಬಿಸಿಸಿಐನ ಅಧ್ಯಕ್ಷ ಹುದ್ದೆಯಿಂದ ಸೌರವ್ ಗಂಗೂಲಿ ಕೆಳಗಿಳಿಯುತ್ತಿದ್ದು ನೂತನ ಅಧ್ಯಕ್ಷರಾಗಿ ರೋಜರ್ ಬಿನ್ನಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐನ 91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 3 ವರ್ಷಗಳ ಕಾಳ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಬಳಿಕ 1983 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರ ರೋಜರ್ ಬಿನ್ನಿಗೆ ಸ್ಥಾನವನ್ನು ಬಿಟ್ಟುಕೊಡಬೇಕಿದೆ.
ಮಂಗಳವಾರ ನಡೆದ 91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ನೂತನವಾಗಿ ನೇಮಕವಾಗಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ಶುಭ ಹಾರೈಸಿದ್ದಾರೆ. "ರೋಜರ್ ಬಿನ್ನಿಗೆ ನಾನು ನಾನು ಶುಭ ಹಾರೈಸುತ್ತಿದ್ದೇನೆ. ಹೊಸ ತಂಡ ಮಂಡಳಿಯನ್ನು ಮುನ್ನಡೆಸಲಿದೆ. ಶ್ರೇಷ್ಠರ ಕೈಯ್ಯಲ್ಲಿ ಬಿಸಿಸಿಐ ಇದೆ. ಭಾರತೀಯ ಕ್ರಿಕೆಟ್ ಸಾಕಷ್ಟು ಬಲಿಷ್ಠವಾಗಿದ್ದು ಅವರೆಲ್ಲರಿಗೂ ನಾನು ಶುಭಹಾರೈಸುತ್ತೇನೆ" ಎಂದಿದ್ದಾರೆ ಸೌರವ್ ಗಂಗೂಲಿ.

ಸೌರವ್ ಗಂಗೂಲಿ ಹೇಳಿಕೆ
ಸುಪ್ರೀಮ್ ಕೋರ್ಟ್‌ನಲ್ಲಿ ಅಧ್ಯಕ್ಷರಾಗಿ ಮುಂದುವರಿಯಲು ಪೂರಕವಾಗುವಂತಾ ತೀರ್ಪು ಬಂದಿದ್ದರೂ ಯಾವ ಕಾರಣಕ್ಕಾಗಿ ಸ್ಥಾನದಲ್ಲಿ ಮುಂದುವರಿಯುತ್ತಿಲ್ಲ ಎಂಬ ಬಗ್ಗೆ ಪ್ರಶ್ನೆ ಎದುರಾಗಿದ್ದಾಗ ಸೌರವ್ ಗಂಗೂಲಿ ಇದಕ್ಕೆ ನೇರವಾಗಿ ಉತ್ತರವನ್ನು ನೀಡಿರಲಿಲ್ಲ. ಈ ಸಂದರ್ಭದಲ್ಲಿ ಗಂಗೂಲಿ ಯಾರೂ ಕೂಡ ಒಂದೇ ಹುದ್ದೆಯಲ್ಲಿ ಸುದೀರ್ಘ ಕಾಲ ಮುಂದುವರಿಯಲು ಸಾಧ್ಯವಿಲ್ಲ ಎಂದು ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದರು.

ಯಾವಾಗಲೂ ಆಡಳಿತಗಾರನಾಗಿರಲು ಸಾಧ್ಯವಿಲ್ಲ
"ನಾನು ಬೆಂಗಾಲ್ ಕ್ರಿಕೆಟ್ ಅಸೊಸಿಯೇಶನ್‌ನ ಅಧ್ಯಕ್ಷನಾಗಿ ಐದು ವರ್ಷಗಳ ಕಾಲ ಆಡಳೀತ ನಡೆಸಿದ್ದೆ. ಬಿಸಿಸಿಐ ಅಧ್ಯಕ್ಷನಾಗಿ ಕೆಲ ವರ್ಷಗಳ ಕಾಲ ಇದ್ದೇನೆ. ಇಷ್ಟು ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ನೀವು ಹುದ್ದೆಯನ್ನು ಬಿಟ್ಟು ಹೋಗುವುದು ಉತ್ತಮ. ಆಡಳಿತಗಾರನಾಗಿ ಸಾಕಷ್ಟು ಕೊಡುಗೆ ನೀಡಬೇಕಾಗುತ್ತದೆ ಹಾಗೂ ತಂಡದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಆಟಗಾರನೂ ಆಗಿದ್ದುಕೊಂಡು ನಾನು ಇಷ್ಟು ವಿಚಾರಗಳನ್ನು ಅರಿತುಕೊಂಡಿದ್ದೆ. ಆಡಳಿತಗಾರನಾಗಿ ನನ್ನ ಅವಧಿಯನ್ನು ನಾನು ಸಾಕಷ್ಟು ಆನಂದಿಸಿದ್ದೇನೆ. ನೀವು ಆಟಗಾರನಾಗಿ ಯಾವಾಗಲೂ ಆಡಿಕೊಂಡಿರಲು ಸಾಧ್ಯವಿಲ್ಲ ಹಾಗೂ ಆಡಳಿತಗಾರನಾಗಿಯೂ ಯಾವಾಗಲೂ ಮುಂದುವರಿಯಲು ಸಾಧ್ಯವಿಲ್ಲ" ಎಂದಿದ್ದಾರೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿ ಎಂದ ಮಮತಾ ಬ್ಯಾನರ್ಜಿ
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವುದು ರಾಜಕೀಯವಾಗಿಯೂ ಸಾಕಷ್ಟು ಕೆಸರೆರಚಾಟಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೌರವ್ ಗಂಗೂಲಿ ಪರವಾಗಿ ಮಾತನಾಡಿದ್ದು ಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ. ಸೌರವ್ ಗಂಗೂಲಿ ಬಗ್ಗೆ ಜಗತ್ತು ಹೆಮ್ಮೆ ಪಡುತ್ತಿದೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಟಗಾರ ಮತ್ತು ಉತ್ತಮ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ. ಅಮಿತ್ ಶಾ ಪುತ್ರನಿಗೆ ಮೂರು ವರ್ಷಗಳ ಅಧಿಕಾರಾವಧಿ ನೀಡಲಾಗಿದೆ. ಸೌರವ್ ಗಂಗೂಲಿಗೆ ಐಸಿಸಿ ಹೋಗಲು ಅವಕಾಶ ಕೊಡಿ ಎಂದು ಮಮತಾ ಬ್ಯಾನರ್ಜಿ ಬಹಿರಂಗವಾಗಿ ಕೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications