ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ಗಂಗೂಲಿ?
ಕೋಲ್ಕತ್ತಾ, ಏ.16: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮುಂದಿನ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ, ಹಾಲಿ ಕೋಚ್ ಡಂಕನ್ ಫ್ಲೆಚರ್ ಅವರ ಸ್ಥಾನ ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಸ ಮುಖವನ್ನು ಹುಡುಕಿದೆ.
ಗುರುವಾರ ದಟ್ಟವಾಗಿ ಹಬ್ಬಿರುವ ಸುದ್ದಿ ಪ್ರಕಾರ, ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಜಗ್ಮೋಹನ್ ದಾಲ್ಮಿಯಾರನ್ನು ಭೇಟಿ ಮಾಡಿ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಕೋಚ್ ಸ್ಥಾನಕ್ಕೆ ಭಾರತೀಯ ಮೂಲದ ಮಾಜಿ ಆಟಗಾರರನ್ನೇ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದ್ದು, ಈ ಪೈಕಿ 'ಬೆಂಗಾಲದ ಹುಲಿ' ಗಂಗೂಲಿ ರೇಸಿನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ.

ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಏ.26ಕ್ಕೆ ನಿಗದಿಯಾಗಿದೆ. ಈ ಸಭೆಯಲ್ಲಿ ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರು ಎಂಬುದರ ಬಗ್ಗೆ ಚರ್ಚೆ ನಡೆಯಲಿದ್ದು ಮುಂದಿನ ಕೋಚ್ ಘೋಷಣೆ ಮಾಡುವ ಸಾಧ್ಯತೆಯಿದೆ. ಹಾಲಿ ಮುಖ್ಯ ತರಬೇತುದಾರ ಡಂಕನ್ ಫ್ಲೆಚರ್ ಅವರ ಅವಧಿ ವಿಶ್ವಕಪ್ 2015 ಟೂರ್ನಿ ಜೊತೆಗೆ ಅಂತ್ಯವಾಗಿದೆ.
2000ರಿಂದ ಇಲ್ಲಿ ತನಕ ಟೀಂ ಇಂಡಿಯಾ ನಾಲ್ಕು ವಿದೇಶಿ ಕೋಚ್ ಗಳನ್ನು ಕಂಡಿದೆ. ಜಾನ್ ರೈಟ್ (ನ್ಯೂಜಿಲೆಂಡ್), ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ),ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ) ಹಾಗೂ ಡಂಕನ್ ಫ್ಲೆಚರ್ (ಜಿಂಬಾಬ್ವೆ) ನಂತರ ಈಗ ಭಾರತೀಯ ಮೂಲದವರು ಟೀಂ ಇಂಡಿಯಾ ಕೋಚ್ ಆಗುವ ಸಾಧ್ಯತೆ ಹೆಚ್ಚಾಗಿರುವುದನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications