For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿ

Sourav Ganguly to increase fees of first-class cricketers

ನವದೆಹಲಿ, ಅಕ್ಟೋಬರ್ 25: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ಗೆ ಮಾರ್ಗ ಸೂಚಿ ರಚಿಸಲು ಮಹತ್ವದ ಸಭೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಪ್ರಥಮದರ್ಜೆ ಕ್ರಿಕೆಟ್‌ಗೆ ಬೆಂಬಲ ಸೂಚಿಸಿ ಪ್ರಮುಖ ಹೆಜ್ಜೆಯನ್ನೂ ಇಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕೃತವಾಗಿ ಘೋಷಿಸಲ್ಪಡುತ್ತಲೇ, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್, ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಜೊತೆ ಸಭೆ ನಡೆಸಿರುವ ದಾದ, ಪ್ರಥಮದರ್ಜೆ ಕ್ರಿಕೆಟರ್‌ಗಳ ವೇತನ ಹೆಚ್ಚಿಸಲು ನಿರ್ಧಾರ ಕೈಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮದರ್ಜೆ ಕ್ರಿಕೆಟ್‌ ವೇತನದಲ್ಲಿ ಬಹಳ ವ್ಯತ್ಯಾಸವಿದೆ. ಸದ್ಯ ಪ್ರಥಮದರ್ಜೆ ಕ್ರಿಕೆಟರ್ ದಿನವೊಂದಕ್ಕೆ 35,000 ರೂ. ವೇತನ ಪಡೆಯುತ್ತಿದ್ದಾರೆ. ಇದನ್ನು ಸುಮಾರು 50,000ಕ್ಕೆ ಹೆಚ್ಚಿಸಲು ಗಂಗೂಲಿ ಯೋಚಿಸಿದ್ದಾರೆ. ಅಂದ್ಹಾಗೆ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟರ್ ಪ್ರತೀ ಪಂದ್ಯಕ್ಕೆ ಟೆಸ್ಟ್‌ಗಾದರೆ ಸುಮಾರು 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ. ಮತ್ತು ಟಿ20ಗೆ 3 ಲಕ್ಷ ರೂ. ಪಡೆಯುತ್ತಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಯ್ಕೆ ಖಾತ್ರಿಯಾದಾಗಲೇ ಗಂಗೂಲಿ ತಾನು ಪ್ರಥಮ ದರ್ಜೆ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈಗ ಮುಂದಡಿಯಿಟ್ಟಿದ್ದಾರೆ. ಈ ಸಂಬಂಧ ಗಂಗೂಲಿ ಮುಂದಿನ ವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

Story first published: Friday, October 25, 2019, 17:33 [IST]
Other articles published on Oct 25, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+