ದಾದಾ ಹುಟ್ಟುಹಬ್ಬಕ್ಕೆ ಟ್ವಿಟ್ಟರಿಗರ ಶುಭಾಶಯ
ಕೋಲ್ಕತಾ, ಜುಲೈ 8: ತಮ್ಮ ಅಭಿಮಾನಿಗಳಿಂದ ದಾದಾ ಎಂದು ಕರೆಸಿಕೊಳ್ಳುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜುಲೈ 8ರಂದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ವೇಳೆ, ಟ್ವಿಟ್ಟರ್ ಬಳಕೆದಾರರು ಅವರಿಗೆ ಶುಭಾಷಯದ ಹೊಳೆ ಹರಿಸಿದ್ದಾರೆ.
ಯುವ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಮುಂತಾದವರು ಶುಭ ಕೋರಿದ್ದಾರೆ.
ಇದಲ್ಲದೆ, ಅವರ ಅಭಿಮಾನಿಗಳು ಅವರ ಗುಣಗಾನ ಮಾಡಿ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಸಲ್ಲಿಸಿದ್ದಾರೆ.
ಏತನ್ಮಧ್ಯೆ, ಶನಿವಾರ ಬೆಳಗ್ಗೆ ಕೋಲ್ಕತಾದಲ್ಲಿ ದಾದಾ ಅಭಿಮಾನಿಗಳು ದೊಡ್ಡ ಕೇಕ್ ಕತ್ತರಿಸುವ ಮೂಲಕ ತಮ್ಮ ಆರಾಧ್ಯ ಕ್ರಿಕೆಟಿಗನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಾರಂಭದಲ್ಲಿ ಸೌರವ್ ಭಾಗವಹಿಸಿ ಎಲ್ಲರ ಗಮನ ಸೆಳೆದರು.
ಓರ್ವ ಆಟಗಾರನಾಗಿ ಆಕ್ರಮಣಕಾರಿ ಮನೋಭಾವ, ಜವಾಬ್ದಾರಿಯುತ ಆಟ, ಸಮರ್ಥ ನಾಯಕತ್ವ ಗುಣಗಳಿಗೆ ಹೆಸರುವಾಸಿಯಾಗಿದ್ದ ಸೌರವ್, ಭಾರತೀಯ ಕ್ರಿಕೆಟ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೆಲವೇ ಕೆಲವು ನಾಯಕರಲ್ಲೊಬ್ಬರು.
ಟ್ವಿಟರ್ ನಲ್ಲಿ ಹರಿದು ಬಂದ ಶುಭಾಷಯಗಳ ಮಹಾಪೂರದಲ್ಲಿ ಆಯ್ದ ಕೆಲವು ಟ್ವೀಟ್ಸ್ ಇಲ್ಲಿ ನಿಮಗಾಗಿ....
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications