Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಸ್ಪ್ರಿತ್‌ ಬುಮ್ರಾ ಕೆಲಸದ ಹೊರೆಯನ್ನು ತಗ್ಗಿಸುವುದು ಹೇಗೆ? ಸೌರವ್ ಗಂಗೂಲಿ ಹೇಳಿದ್ದೇನು?

ವೇಗದ ಬೌಲರ್‌ ಜಸ್ಪ್ರಿತ್‌ ಬುಮ್ರಾ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ಮಾಡಿದ ತಪ್ಪನ್ನು ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಮಾಡಬಾರದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. 31 ವರ್ಷದ ವೇಗದ ಬೌಲರ್ ಅವರು ಗಾಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು ತಂಡದ ದೊಡ್ಡ ಜವಾಬ್ದಾರಿಯಾಗಿದೆ. ಅವರ ಕೆಲಸದ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವದು ಅನಿವಾರ್ಯವಾಗಿದೆ ಎಂದು ದಾದಾ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರಿತ್‌ ಬುಮ್ರಾ ಐದು ಪಂದ್ಯಗಳ ಸರಣಿಯಲ್ಲಿ 150ಕ್ಕೂ ಹೆಚ್ಚಿನ ಓವರ್‌ಗಳನ್ನು ಬೌಲಿಂಗ್ ನಡೆಸಿದ್ದರು. ಇವರು ಬಾರ್ಡರ್‌ ಗವಾಸ್ಕರ್‌ ಸರಣಿಯ ಎರಡನೇ ಹಾಗೂ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 20ಕ್ಕೂ ಹೆಚ್ಚು ಓವರ್‌ ಬೌಲ್ ಮಾಡಿದ್ದರು. ಸಿಡ್ನಿ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಬುಮ್ರಾ ಬೌಲ್‌ ಮಾಡಿರಲಿಲ್ಲ. ಇದಾದ ಬಳಿಕ ವೇಗಿ ಕೆಲವು ತಿಂಗಳು ಮೈದಾನದಿಂದ ಹೊರಗುಳಿದಿದ್ದರು. ಈಗ ಇವರು ಕಮ್‌ ಬ್ಯಾಕ್‌ ಮಾಡಲು ಸಿದ್ಧರಾಗಿದ್ದಾರೆ. ಬುಮ್ರಾ ಈಗಾಗಲೇ ಐಪಿಎಲ್‌ನಲ್ಲಿ ಸ್ಥಿರ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.

Sourav Ganguly Warns India Against Overworking Jasprit Bumrah in England

ರೆವ್‌ಸ್ಟೋರ್ಟ್ಸ್‌ ಜೊತೆ ಮಾತನಾಡಿರುವ ಸೌರವ್ ಗಂಗೂಲಿ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬುಮ್ರಾ ಅವರು 12 ರಿಂದ 13 ಓವರ್‌ ಬೌಲ್ ಮಾಡಿಸಬೇಕು ಎಂದು ತಿಳಿಸಿದ್ದಾರೆ. ಬುಮ್ರಾ ಅವರು ಮುಂದಾಳತ್ವದಲ್ಲಿ ವೇಗದ ಬೌಲಿಂಗ್ ವಿಭಾಗವು ಬಲಿಷ್ಠವಾಗಿ ಕಾಣುತ್ತಿದೆ. ಈ ಸರಣಿಯಲ್ಲಿ ನಾಲ್ಕು ವೇಗದ ಬೌಲರ್‌ಗಳು ಮುಖ್ಯ. ಈ ಯುನಿಟ್‌ನಲ್ಲಿ ಸಿರಾಜ್‌, ಅರ್ಷದೀಪ್‌ ಸಿಂಗ್‌ ವಿವಿಧತೆಯನ್ನು ತಂದಿದ್ದು ಭಾರತದ ಬೌಲಿಂಗ್ ಬಲಿಷ್ಠವಾಗಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ವೇಗಿ ಬುಮ್ರಾಗೆ ಯಾವೊಬ್ಬ ಬೌಲರ್‌ ಉತ್ತಮ ಸಾಥ್ ನೀಡಿರಲಿಲ್ಲ. ಈ ವಿಷಯ ಬಹುವಾಗಿ ಕಾಡಿತ್ತು. ಇದೇ ವಿಷಯ ಭಾರತದ ಬೌಲಿಂಗ್ ವಿಭಾಗದ ಮೇಲೆ ಹೆಚ್ಚಿನ ಒತ್ತಡವನ್ನು ಸಹ ಹೇರುವಂತೆ ಮಾಡಿತು. ಹೀಗಾಗಿ ರೋಹಿತ್ ಶರ್ಮಾ ಟ್ರಂಪ್‌ ಕಾರ್ಡ್‌ ಬೌಲರ್‌ಗಳನ್ನು ಬಳಸಿಕೊಳ್ಳಬೇಕಾಯಿತು.

Sourav Ganguly Warns India Against Overworking Jasprit Bumrah in England

ಟೀಮ್ ಇಂಡಿಯಾ ಮುಂದಿದೆ ಸಾಲು ಸಾಲು ಸವಾಲು

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ವೇಗದ ಬೌಲಿಂಗ್ ಸಂಯೋಜನೆ ಇನ್ನು ಪಕ್ಕಾ ಆಗಿಲ್ಲ. ಆದರೆ ಜಸ್ಪ್ರಿತ್ ಬುಮ್ರಾ ಅವರೊಂದಿಗೆ, ಮೊಹಮ್ಮದ್ ಸಿರಾಜ್ ನೊಗವನ್ನು ಹೊರಲು ಸಿದ್ಧರಾಗಿದ್ದಾರೆ. ಇವರಿಗೆ ತಂಡದಲ್ಲಿ ಇರುವ ಇತರೆ ವಿಭಿನ್ನ ಶೈಲಿಯ ವೇಗದ ಬೌಲರ್‌ಗಳು ಉತ್ತಮ ಸಾಥ್ ನೀಡಬೇಕಿದೆ. ಟೀಮ್ ಇಂಡಿಯಾ ಬೌಲಿಂಗ್ ಲೈನ್‌ ಅಪ್‌ನಲ್ಲಿ ಯುವ ವೇಗದ ಬೌಲರ್ ಪ್ರಸಿದ್ಧ ಕೃಷ್ಣ, ಆಕಾಶ್‌ ದೀಪ್‌, ಅರ್ಷದೀಪ್ ಅವರಂತಹ ನುರಿತ ಬೌಲರ್‌ಗಳು ಇದ್ದಾರೆ. ಇವರನ್ನು ನಾಯಕ ಚೆನ್ನಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ.

ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವವನ್ನು ಯುವ ಆಟಗಾರ ಶುಭಮನ್‌ ಗಿಲ್ ತುಂಬಿದ್ದಾರೆ. ಇವರ ಮುಂದಾಳತ್ವದಲ್ಲಿ ಯುವ ಪಡೆ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ. ಗಿಲ್‌ ಅವರಿಗೆ ಮೊದಲ ಪರೀಕ್ಷೆಯೇ ಸವಾಲಿನದ್ದಾಗಿದೆ. ಬುಮ್ರಾ ಅವರು ಈ ಸರಣಿಯಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡ್ತಾರೆ. ಬುಮ್ರಾ ಇಂಗ್ಲೆಂಡ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 37 ವಿಕೆಟ್‌ ಕಬಳಿಸಿದ್ದಾರೆ.

Story first published: Thursday, June 12, 2025, 10:43 [IST]
Other articles published on Jun 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+