ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಜೋಹಾನ್

ಕೇಪ್‌ಟೌನ್, ಜನವರಿ 24: ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಜೋಹಾನ್ ಬೋಥಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಜೋಹಾನ್ ಪ್ರತಿನಿಧಿಸುವ ಹೊಬರ್ಟ್ ಹರಿಕೇನ್ಸ್ ತಂಡ ಬುಧವಾರ (ಜನವರಿ 23) ತಡರಾತ್ರಿ ಈ ವಿಚಾರವನ್ನು ತಿಳಿಸಿದೆ.
36ರ ಹರೆಯದ ಬೋಥಾ 2016ರಲ್ಲಿ ಆಸ್ಟ್ರೇಲಿಯಾದ ಪೌರತ್ವ ಪಡೆದುಕೊಂಡಿದ್ದರು. ಬುಧವಾರ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಜೋಹಾನ್‌ಗೆ ಒಂದೂ ವಿಕೆಟ್ ಲಭಿಸಿರಲಿಲ್ಲ. ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ 9 ವಿಕೆಟ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು.
2005ರಿಂದ 2012ರ ವರೆಗೆ ದಕ್ಷಿಣ ಆಫ್ರಿಕಾ ಪರ ಬೋಥಾ ಒಟ್ಟು 5 ಟೆಸ್ಟ್, 78 ಅಂತಾರಾಷ್ಟ್ರೀಯ ಏಕದಿನ ಮತ್ತು 40 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. 10 ಏಕದಿನ ಪಂದ್ಯಗಳಲ್ಲಿ ಪ್ರೋಟಿಯಾಸ್ ನಾಯಕತ್ವ ವಹಿಸಿದ್ದ ಜೋಹಾನ್, 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1ರಿಂದ ಸರಣಿ ಜಯಿಸಿ ತಂಡ ನಂ.1 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Story first published: Thursday, January 24, 2019, 12:42 [IST]
Other articles published on Jan 24, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications