WTC Final 2025: ದಕ್ಷಿಣ ಆಫ್ರಿಕಾದ ಅನುಭವಿಗಳ ತಂಡ ಪ್ರಕಟ
ಐಸಿಸಿ ಟ್ರೋಫಿಯನ್ನು ಗೆದ್ದು ತಮ್ಮ ಮೇಲಿರುವ ಚೋಕರ್ಸ್ ಪಟ್ಟವನ್ನು ಕಳಿಚುವ ಮಹದಾಸೆಯಿಂದ ದಕ್ಷಿಣ ಆಫ್ರಿಕಾ ಲಾರ್ಡ್ಸ್ ಪ್ರಯಾಣ ಬೆಳೆಸಲಿದೆ. ಜೂನ್ 11 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಂಪಿಯನ್ ಶಿಪ್ ಫೈನಲ್ ಫೈನಲ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದೆ. 2023ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.
ಮೇ 13 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಂಡವನ್ನು ಪ್ರಕಟಿಸಲು ಕೊನೆಯ ದಿನವಾಗಿತ್ತು. ಇದಕ್ಕಾಗಿ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿತ್ತು. ಆಸೀಸ್ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಮಂಗಳವಾರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ತೆಂಬು ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ.

ತೆಂಬು ಬವುಮಾ ತಂಡದ ಬ್ಯಾಟಿಂಗ್ ಶಕ್ತಿ ಉಳಿದಂತೆ, ಐಡೆನ್ ಮಾರ್ಕ್ರಾಮ್, ಟೋನಿ ಡಿ ಜಾರ್ಜಿ, ರಯಾನ್ ರಿಕಲ್ಟನ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ ರನ್‌ಗಳನ್ನು ಗುಡ್ಡೆ ಹಾಕುವ ಪ್ಲೇಯರ್ಸ್. ಪ್ರಶಸ್ತಿ ಸುತ್ತಿನ ಕಾದಾಟಕ್ಕಾಗಿ ಕೈಲ್ ವೆರ್ರೆನ್ ವಿಕೆಟ್ ಕೀಪರ್ ಆಗಿ ಆಯ್ಕೆ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವೇಗದ ಬೌಲರ್‌ಗಳಷ್ಟೇ ಸ್ಪಿನ್ ಬೌಲರ್‌ಗಳಿಗೆ ಮಹತ್ವವನ್ನು ನೀಡಿದೆ. ಕೇಶವ್ ಮಹರಾಜ್, ಸೆನುರನ್ ಮುತ್ತುಸ್ವಾಮಿ ರೂಪದಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳು ತಂಡದಲ್ಲಿದ್ದಾರೆ.

ಲುಂಗಿ ಎನ್‌ಗಿಡಿಗೆ ಸ್ಥಾನ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಅನುಭವಿ ಆಟಗಾರರಿಗೆ ಮಣೆ ಹಾಕಲಾಗಿದೆ. ಪ್ರಕಟಿತ 15 ಜನರ ತಂಡವನ್ನು ತೆಂಬು ಬವುಮಾ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್‌ಗಳನ್ನು ಕಾಡಲು ಕಗಿಸೊ ರಬಾಡ, ಡಾನ್ ಪ್ಯಾಟರ್ಸನ್ ಮತ್ತು ಲುಂಗಿ ಎನ್‌ಗಿಡಿ ಸಿದ್ಧರಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಸುಮಾರು ಏಳು ತಿಂಗಳಗಳ ಬಳಿಕ ಬಿಳಿ ಜೆರ್ಸಿ ತೊಟ್ಟು ಅಂಗಳಕ್ಕೆ ಇಳಿಯಲಿದೆ. ಈ ತಂಡದಲ್ಲಿ ಆಲ್‌ರೌಂಡರ್‌ಗಳಾದ ಮಾರ್ಕೊ ಜಾನ್ಸೆನ್, ವಿಯಾನ್ ಮುಲ್ಡರ್ ಮತ್ತು ಕಾರ್ಬಿನ್ ಬಾಷ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ: ತೆಂಬು ಬವುಮಾ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕಾರ್ಬಿನ್ ಬಾಷ್, ಟೋನಿ ಡಿ ಜಾರ್ಜಿಯೊ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ, ಲುಂಗಿ ಎನ್ಗಿಡಿ, ಡೇನ್ ಪ್ಯಾಟರ್ಸನ್, ಕಗಿಸೊ ರಬಾಡ, ರಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ರೆನ್ ವೆರ್ರಿನ್ ಮತ್ತು ಕೆ.
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಋತುವಿನಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದ್ದುಕೊಂಡಿದ್ದು, ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಚೊಚ್ಚಲ ಪ್ರಯತ್ನದಲ್ಲೇ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications