ಟೆಸ್ಟ್ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಜೆಪಿ ಡುಮಿನಿ

Posted By:

ಜೋಹಾನ್ಸ್ ಬರ್ಗ್, ಸೆಪ್ಟೆಂಬರ್ 16 : ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ಬದುಕಿಗೆ ದಕ್ಷಿಣ ಆಫ್ರಿಕಾದ ಆಟಗಾರ ಜೆಪಿ ಡುಮಿನಿ ವಿದಾಯ ಘೋಷಿಸಿದ್ದಾರೆ.

ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ನಿಂದ ದೂರವಾಗಿ ಏಕದಿನ ಹಾಗೂ ಟಿ-20 ಮಾದರಿ ಕ್ರಿಕೆಟ್ ನಲ್ಲಿ ಮುಂದುರೆಯುತ್ತೇನೆಂದು ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟ್ಸ್ ಮನ್ ಡುಮಿನಿ ಇಂದು (ಸೆ.16) ಪ್ರಕಟಿಸಿದರು.

South Africa batsman JP Duminy Announces Retirement From Test Cricket

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದಿದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಜೆಪಿ ಡುಮಿನಿ ಅವರನ್ನು ಕೈಬಿಡಲಾಗಿತ್ತು. ಅಂದೇ ಕ್ರಿಕೆಟ್ ಗೆ ವಿದಾಯ ಘೋಷಿಸಿ ಏಕದಿನ ಮತ್ತು ಟಿ20 ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಡುಮಿನಿ ತೀರ್ಮಾನಿಸಿದ್ದರು. ಇಂದು ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿರು.

33 ವರ್ಷದ ಡುಮಿನಿ 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.

ಈ ವರೆಗೆ 46 ಟೆಸ್ಟ್ ಪಂದ್ಯಗಳು ಆಡಿರುವ ಡುಮಿನಿ 2,103 ರನ್ ಸಿಡಿಸಿದ್ದಾರೆ. ಐದು ಶತಕ ಹಾಗೂ 8 ಅರ್ಧ ಶತಕಗಳು ಸೇರಿವೆ.

Story first published: Saturday, September 16, 2017, 16:09 [IST]
Other articles published on Sep 16, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ