Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್‌ಮ್ಯಾನ್‌ನಂತೆ ಕ್ಯಾಚ್ ಪಡೆದ ಫಾ ಡು ಪ್ಲೆಸಿಸ್: ವೈರಲ್ ವೀಡಿಯೋ

Faf du Plessis takes sensational catch in South Africa's win over Sri Lanka | Oneindia Kannada
South Africa captain Faf du Plessis takes a stunning one-handed catch

ಜೋಹಾನ್ಸ್‌ಬರ್ಗ್, ಜನವರಿ 27: ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಫಾ ಡು ಪ್ಲೆಸಿಸ್ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯದ ವೇಳೆ ಡು ಪ್ಲೆಸಿಸ್ ಪಡೆದ ಸೂಪರ್ ಮ್ಯಾನ್ ಕ್ಯಾಚ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಇಂಗ್ಲೆಂಡ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಡು ಪ್ಲೆಸಿಸ್ ಪಡೆದ ಕ್ಯಾಚ್‌ನಿಂದಾಗಿ ಇಂಗ್ಲೆಂಡ್ ನಾಯಕ ಜೋ ರೂಟ್ 58 ರನ್‌ಗೆ ನಿರ್ಗಮಿಸಬೇಕಾಯಿತು. ಅಷ್ಟೇ ಅಲ್ಲ ಜೋ ರೂಟ್‌ ವಿಕೆಟ್‌ ಪತನದೊಂದಿಗೆ ಇಂಗ್ಲೆಂಡ್‌ ಎಲ್ಲಾ ವಿಕೆಟ್‌ ಕಳೆದು ಇನ್ನಿಂಗ್ಸ್‌ ಕೂಡ ಮುಗಿಸಬೇಕಾಗಿ ಬಂತು.

61.3ನೇ ಓವರ್‌ನಲ್ಲಿ ಬ್ಯೂರನ್ ಹೆಂಡ್ರಿಕ್ಸ್‌ ಎಸೆತಕ್ಕೆ ಜೋ ರೂಟ್‌ ಬ್ಯಾಟ್‌ ಬೀಸಿದರು. ಬ್ಯಾಟ್‌ನ ಬದಿಗೆ ಬಡಿದ ಚೆಂಡು ಸ್ಲಿಪ್‌ನಲ್ಲಿದ್ದ ಡು ಪ್ಲೆಸಿಸ್ ಹಾದು ಬೌಂಡರಿ ಲೈನ್‌ನತ್ತ ಹೋಗುವುದರಲ್ಲಿತ್ತು. ಆದರೆ ಮಿಂಚಿನ ವೇಗದಲ್ಲಿ ಜಿಗಿದ ಡು ಪ್ಲೆಸಿಸ್ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದುಬಿಟ್ಟರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್ ಮಾಡಿತ್ತು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 183 ಪೇರಿಸಿ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಇಂಗ್ಲೆಂಡ್‌ 248 ರನ್ ಬಾರಿಸಿದೆ. ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ ಆಡುವುದರಲ್ಲಿದೆ.

Story first published: Monday, January 27, 2020, 13:18 [IST]
Other articles published on Jan 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+