ಐಸಿಸಿ ನಿಯಮ ಉಲ್ಲಂಘಿಸಿದ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬವುಮಾ ನಡೆಗೆ ಖಂಡನೆ

ಬೆಲ್ಫಾಸ್ಟ್: ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮ ಉಲ್ಲಂಘಿಸಿದ್ದಕ್ಕೆ ಐಸಿಸಿಯಿಂದ ಖಂಡನೆಗೊಳಗಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲನೇ ಟಿ20ಐ ಪಂದ್ಯದ ವೇಳೆಯ ನಡೆಗಾಗಿ ಬವುಮಾ ಖಂಡಿಸಲ್ಪಟ್ಟಿದ್ದಾರೆ.
ಸೋಮವಾರ ನಡೆದಿದ್ದ ಐರ್ಲೆಂಡ್-ದಕ್ಷಿಣ ಆಫ್ರಿಕಾ ಮೊದಲನೇ ಟಿ20ಐ ಪಂದ್ಯದ ವೇಳೆ ತೆಂಬ ಬವುಮಾ ಅವರು ಐಸಿಸಿ ನಿಯಮ ಮೀರಿ ನಡೆದುಕೊಂಡಿದ್ದರು. ಐಸಿಸಿ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿ ನಡೆದುಕೊಂಡಿದ್ದಾಗಿ ಬವುಮಾಗೆ ಎಚ್ಚರಿಕೆ ನೀಡಲಾಗಿದೆ.
ಆರ್ಟಿಕಲ್ 2.3ರ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಆಟಗಾರ ಅಥವಾ ಬೆಂಬಲ ಸಿಬ್ಬಂದಿ ಅಶ್ಲೀಲವಾಗಿ ಅಥವಾ ಅಸಭ್ಯವಾಗಿ ಮಾತನಾಡಿದ್ದಕ್ಕೆ ಸಂಬಂಧಿಸಿದೆ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.
ಪಂದ್ಯದಲ್ಲಿ ಬವುಮಾ ಅವರು ಏನೋ ಕೆಟ್ಟದಾಗಿ ಮಾತನಾಡಿದ್ದರು. ಅದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು. ತಾನು ಮಾಡಿರುವ ತಪ್ಪನ್ನು ಬವುಮಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ನಡೆಯನ್ನು ಖಂಡಿಸಿ ಐಸಿಸಿ ಎಚ್ಚರಿಕೆ ನೀಡಿದೆ. ಅಂದ್ಹಾಗೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 33 ರನ್ ಜಯ ಗಳಿಸಿತ್ತು. ಮೂರು ಪಂದ್ಯಗಳ ಟಿ20ಐ ಸರಣಿಯೂ 2-0ಯಿಂದ ಆಫ್ರಿಕಾ ವಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications