ಸಿಇಒ ಥಬಾಂಗ್ ಮೊರೊಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಿಂದ ಗೇಟ್ ಪಾಸ್

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಅಲ್ಲಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಥಬಾಂಗ್ ಮೊರೊಗೆ ಗೇಟ್ ಪಾಸ್ ಸೀಡಿದೆ. ಗಂಭೀರ ದುರ್ನಡತೆ ತೋರಿರುವ ಕಾರಣ ನೀಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್, ಸಿಇಒ ಮೊರೊ ಅವರನ್ನು ಸ್ಥಾನದಿಂದ ಕೆಳಗಿಳಿಸಿದೆ.
ಥಬಾಂಗ್ ಮೊರೊ ಮಾಡಿರುವ ತಪ್ಪೇನೆಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸ್ಪಷ್ಟವಾಗಿ ಹೇಳಿಕೊಂಡಿಲ್ಲ. ಆದರೆ ದುರ್ನಡತೆ ತೋರಿದ್ದಕ್ಕಾಗಿ ನಾವು ಮೊರೊ ಅವರನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದೇವೆ ಎಂದಷ್ಟೇ ಗುರುವಾರ (ಆಗಸ್ಟ್ 17) ಘೋಷಣೆ ಮಾಡಿದೆ.
ತನಿಖೆಯ ಫಲಿತಾಂಶ ಬಾಕಿ ಉಳಿದಿರುವಾಗಲೇ ಮೊರೊ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ, ತನಿಖೆಯಲ್ಲಿ ಸಂಸ್ಥೆಯ ಹಣಕಾಸಿನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯೂ ಸೇರಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಿಳಿಸಿದೆ.
'ಸ್ವತಂತ್ರ ವಿಧಿವಿಜ್ಞಾನ ತನಿಖೆಯ ವೇಳೆ ಥಬಾಂಗ್ ಮೊರೊ ಅವರು ಗಂಭೀರ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ, ಹೀಗಾಗಿ ಅವರನ್ನು ಸ್ಥಾನದಿಂದ ವಜಾಗೊಳಿಸಲು ಅದು ಅನುಮತಿ ನೀಡಿದೆ,' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications