ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ದ. ಆಫ್ರಿಕಾದ ಓರ್ವ ಆಟಗಾರನಿಗೆ ಕೊರೊನಾ ದೃಢ

ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಓರ್ವ ಆಟಗಾರನಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಆಟಗಾರನ ಸಹಿತ ಆತನ ಸಂಪರ್ಕದಲ್ಲಿದ್ದ ಇತರ ಇಬ್ಬರು ಆಟಗಾರರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಪಂದ್ಯಗಳ ಸರಣಿಗೂ ಮುನ್ನ ಆಟಗಾರರ ಪರೀಕ್ಷೆಯನ್ನು ನಡೆಸಲಾಗಿತ್ತು. ಬಯೋಬಬಲ್‌ಗೆ ಸೇರಿಸಿಕೊಳ್ಳುವ ಮುನ್ನ ನಡೆದ ಈ ಪರೀಕ್ಷೆಯಲ್ಲಿ ಓರ್ವ ಆಟಗಾರನಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಆ ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ. ಮೂವರು ಆಟಗಾರರು ಐಸೋಲೇಶನ್‌ನಲ್ಲಿದ್ದು ವೈರಸ್‌ನ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ ಎಂದಿದ್ದಾರೆ.
"ಓರ್ವ ಆಟಗಾರನ ಕೊರೊನಾ ವೈರಸ್ ಪರಿಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಆತನ ಜೊತೆಗೆ ಸಮೀಪದ ಸಂಪರ್ಕ ಹೊಂದಿದ್ದ ಕಾರಣಕ್ಕೆ ವೈದ್ಯಕೀಯ ತಂಡ ಇನ್ನಿಬ್ಬರನ್ನು ಮುಂಜಾಗ್ರಥಾ ಕ್ರಮವಾಗಿ ಪ್ರತ್ಯೇಕವಾಗಿರಿಸಲಾಗಿದೆ" ಎಂದು ಸಿಎಸ್‌ಎ ತನ್ನ ಸ್ಟೇಟ್‌ಮೆಂಟ್‌ನಲ್ಲಿ ತಿಳಿಸಿದೆ.
ಈ ಆಟಗಾರರ ಬದಲಿಗೆ ಯಾವುದೇ ಹೊಸ ಆಟಗಾರರನ್ನು ತಂಡಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೇರಸಿಕೊಂಡಿಲ್ಲ. ಆದರೆ ಇಬ್ಬರು ಆಟಗಾರರು ಆಂತರಿಕ ಅಭ್ಯಾಸದ ದೃಷ್ಟಿಯಿಂದ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ನವೆಂಬರ್ 27ರಿಂದ ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಟಿ20 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪಾಲ್ಗೊಳ್ಳಲಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಹಾಗೂ ಪಾರ್ಲ್‌ನ ಬಲಾಂಡ್ ಪಾರ್ಕ್‌ನಲ್ಲಿ ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications