ಕೊರೊನಾ ವೈರಸ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೂ 'ಕನ್ನಿಕಾ' ಕಂಟಕ

ಬಾಲಿವುಡ್‌ನ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಕೊರೊನಾ ಪಾಸಿಟಿವ್ ಆಗಿರೋದು ಹಲವು ಸೆಲೆಬ್ರಿಟಿಗಳಿಗೆ ತಲೆನೋವು ತಂದಿರುವುದು ಗೊತ್ತೇ ಇದೆ. ವಿದೇಶದಿಂದ ಬಂದ ಕನ್ನಿಕಾ ಕಪೂರ್ ಈ ವಿಚಾರವನ್ನು ಮುಚ್ಚಿಟ್ಟು ಅನೇಕ ಸೆಲೆಬ್ರಿಟಿಗಳ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಇದು ಬೆಳಕಿಗೆ ಬಂದ ಬಳಿಕ ಮತ್ತೊಂದು ಪ್ರಮುಖ ವಿಚಾರ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಮಡದ ಸದಸ್ಯರು ತಂಗಿದ್ದ ಕೊಠಡಿಯಲ್ಲೇ ಕನ್ನಿಕಾ ಕಪೂರ್ ತಂಗಿದ್ದರು ಎಂಬುದು ತಿಳಿದುಬಂದಿದೆ.
ಕನ್ನಿಕಾ ಕಪೂರ್ ಮಾರ್ಚ್ 11ರ ಬಳಿಕ ಸಂಪರ್ಕದಲ್ಲಿದ್ದ ಎಲ್ಲರನ್ನೂ ತಪಾಸಣೆಗೆ ಒಳಪಡಿಸುವ ಕಾರ್ಯವನ್ನು ಈಗಾಗಲೆ ನಡೆಸಲಾಗಿದೆ. ವೈದ್ಯಕೀಯ ಅಧಿಕಾರಿಗಳ ತಂಡ ಶನಿವಾರ ಕನ್ನಿಕಾ ನಿವಾಸದ ಬಳಿಯ 22,000 ಜನರನ್ನು ಸ್ಕ್ಯಾನ್ ಮಾಡಿರುವುದಾಗಿ ತಿಳಿಸಿದೆ. ಇನ್ನೊಂದು ತಂಡ ಕನ್ನಿಕಾ ಮಾರ್ಚ್ 14 ರಿಂದ 16ರ ವರೆಗೆ ತಂಗಿದ್ದ ಲಕ್ನೋದ ಪಂಚತಾರಾ ಹೋಟೆಲ್‌ನ ಸಿಸಿಟಿವಿ ವಿಡಿಯೋ ದಾಖಲೆಗಳನ್ನು ಸಂಗ್ರಹಿಸಿದೆ.
ಟೀಮ್ ಇಂಡಿಯಾ ವಿರುದ್ಧದ ದಕ್ಷಿಣ ಆಫ್ರಿಕಾ ತಂಡ ಏಕದಿನ ಪಂದ್ಯವನ್ನಾಡಲು ಬಂದಿದ್ದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಕನ್ನಿಕಾ ಕಪೂರ್ ತಂಗಿದ್ದ ಹೋಟೆಲ್‌ನಲ್ಲಿ ತಂಗಿದ್ದ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ತವರಿಗೆ ತೆರಳಿರುವ ದಕ್ಷಿಣ ಆಫ್ರಿಕಾ ತಮಡದ ಆಟಗಾರರಿಗೂ ಮತ್ತೆ ಆತಂಕ ಮೂಡುವಂತೆ ಮಾಡಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಒಂದೂ ಪಂದ್ಯ ನಡೆಯದೆ ರದ್ದಾಗಿದೆ. ದಕ್ಷಿಣ ಆಫ್ರಿಕಾದ ಎಲ್ಲಾ ಕ್ರಿಕೆಟಿಗರೂ ಬಳಿಕ ತಮ್ಮ ದೇಶಕ್ಕೆ ಮರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications