Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ಟೆಸ್ಟ್‌ಗೆ 6 ಅನ್‌ಕ್ಯಾಪ್ಡ್‌ ಆಟಗಾರರ ಹೆಸರಿಸಿದ ದಕ್ಷಿಣ ಆಫ್ರಿಕಾ

South Africa name six uncapped players for England Tests

ಪ್ರಿಟೋರಿಯಾ, ಡಿಸೆಂಬರ್ 17: ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿಯ ಆರಂಭಿಕ ಎರಡು ಟೆಸ್ಟ್‌ಗಳಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ 6 ಮಂದಿ ಅನ್‌ಕ್ಯಾಪ್ಡ್‌ ಆಟಗಾರರನ್ನು ಹೆಸರಿಸಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಪ್ರಕಟಿಸಿರುವ 16 ಜನರ ತಂಡದಲ್ಲಿ 6 ಜನ ಅನ್‌ಕ್ಯಾಪ್ಡ್‌ ಆಟಗಾರರಿದ್ದಾರೆ.

ದಕ್ಷಿಣ ಆಫ್ರಿಕಾ ದೈತ್ಯದಾರ ಡೇಲ್ ಸ್ಟೇನ್ ಮತ್ತು ಹಾಶಿಮ್ ಆಮ್ಲ ನಿವೃತ್ತಿ ನೀಡಿರುವುದರಿಂದ ಅವರ ಶಕ್ತಿ ಆಫ್ರಿಕಾಕ್ಕೆ ಇಲ್ಲವಾಗಿದೆ. ಅಲ್ಲದೆ ವೇಗಿ ಲುಂಗಿ ಎನ್‌ಗಿಡಿ, ಆಲ್ ರೌಂಡರ್ ವಿಯಾನ್ ಮುಲ್ದಾರ್, ಬೌಚರ್ ನಂತ ಆಟಗಾರರು ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಆಫ್ರಿಕಾ, ಹೊಸ ಮುಖಗಳನ್ನು ಪರಿಚಯಿಸಲು ಯೋಚಿಸಿದೆ.

ಬ್ಯಾಟ್ಸ್‌ಮನ್ ಪೀಟರ್ ಮಲಾನ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ವೇಗಿ ಡೇನ್ ಪ್ಯಾಟರ್‌ಸನ್ ಮತ್ತು ಬ್ಯೂರನ್ ಹೆಂಡ್ರಿಕ್ಸ್, ಆಲ್ ರೌಂಡರ್ ಡ್ವೇನ್ ಪ್ರೊಟೋರಿಯಸ್ ಮತ್ತು ವಿಕೆಟ್ ಕೀಪರ್ ರೂಡಿ ಸೆಕೆಂಡ್ ಇವರು ಡಿಸೆಂಬರ್ 26ರಿಂದ ಪ್ರಿಟೋರಿಯಾದಲ್ಲಿ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ತೆಂಬ ಬವುಮಾ, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಬ್ಯೂರನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಜುಬೇರ್ ಹಮ್ಜಾ, ಅನ್ರಿಕ್ ನಾರ್ಟ್ಜೆ, ಡೇನ್ ಪ್ಯಾಟರ್ಸನ್, ಆಂಡಿಲೆ ಫೆಹ್ಲಕ್ವಾಯೊ, ವೆರ್ನಾನ್ ಫಿಲಾಂಡರ್, ಡ್ವೈನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ರೂಡಿ ಸೆಕೆಂಡ್, ರಾಸ್ಸಿ ವ್ಯಾನ್ ಡೆರ್ ಡುಸೆನ್.

Story first published: Monday, December 16, 2019, 23:17 [IST]
Other articles published on Dec 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+