ಭಾರತ ವಿರುದ್ಧದ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಜೋಹಾನ್ಸ್ ಬರ್ಗ್, ಮಾರ್ಚ್ 02: ಭಾರತ ವಿರುದ್ಧದ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಿಸಲಾಗಿದೆ. ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ರಾಸ್ಸಿ ವಾನ್ ಡರ್ ಡುಸ್ಸೆನ್ ತಂಡಕ್ಕೆ ಮರಳಿದ್ದಾರೆ. 15 ಮಂದಿ ಸದಸ್ಯರ ತಂಡಕ್ಕೆ ಡಿಕಾಕ್ ನಾಯಕರಾಗಿದ್ದಾರೆ.
ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಮಾರ್ಚ್ 12ರಿಂದ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಧರ್ಮಶಾಲಾದಲ್ಲಿ, ಎರಡನೇ ಹಾಗೂ ಮೂರನೇ ಪಂದ್ಯ ಕ್ರಮವಾಗಿ ಲಕ್ನೋ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿದೆ.
ಜಾನೆಮನ್ ಮಲಾನ್ ತಂಡದಿಂದ ಕೈಬಿಡಲಾಗಿದೆ. ಸ್ಪಿನ್ನರ್ ಷಂಶಿ ತಂಡದಿಂದ ಹೊರಗುಳಿದಿದ್ದಾರೆ. ಷಂಶಿ ಪತ್ನಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜಾರ್ಜ್ ಲಿಂಡೆ ಮೊದಲ ಬಾರಿಗೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಲಿಂಡೆ ಉತ್ತಮ ಪ್ರದರ್ಶನ ನೀಡಿದ್ದರು.
ದಕ್ಷಿಣ ಆಫ್ರಿಕಾ ತಂಡ ಹೀಗಿದೆ:
ಕ್ವಿಂಟಾನ್ ಡಿ ಕಾಕ್, ಟೆಂಬಾ ಬವುಮಾ, ರಾಸಿ ವಾನ್ ಡರ್ ಡುಸ್ಸೆನ್, ಫಾಫ್ ಡುಸ್ಸೆನ್, ಕೈಲಿ ವೆರೆಯ್ನೆ, ಹೈರಿಂಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಅಂಡಿಲೆ ಫೆಹ್ಲುಕ್ವಾಯೋ, ಲುಂಗಿ ನಿಗಿಡಿ, ಲುಥೋ ಸಿಪಂಲಾ, ಬಿಯೂರನ್ ಹೆಂಡ್ರಿಕ್ಸ್, ಅನ್ರಿಚ್ ನೋರ್ಟ್ಜೆ, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications