Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಯೂರೋ ಟಿ20 ಸ್ಲ್ಯಾಮ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವೇಗಿ ಡೇಲ್ ಸ್ಟೇನ್!

South Africa pacer Dale Steyn joins Euro T20 Slam

ಮಲಾಹೈಡ್, ಜುಲೈ 2: ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್ ಅವರು ಯೂರೋ ಟಿ20 ಸ್ಲ್ಯಾಮ್‌ನಲ್ಲಿ ಟೂರ್ನಿಯ ಐಕಾನ್ ಆಗಿ ಪಾಲ್ಗೊಳ್ಳಲಿದ್ದಾರೆ. ಒಟ್ಟು ಆರು ಫ್ರಾಂಚೈಸಿಗಳ ಮಧ್ಯೆ ಪಂದ್ಯಗಳು ನಡೆಯಲಿದ್ದು, ಟೂರ್ನಿ ಐರ್ಲೆಂಡ್‌ನ ಮಲಾಹೈಡ್ ನಲ್ಲಿ ಆಗಸ್ಟ್ 30ರಿಂದ ಆರಂಭಗೊಳ್ಳಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐರ್ಲೆಂಡ್, ನೆದರ್ಲೆಂಡ್, ಸ್ಕಾಟ್ಲೆಂಡ್ ಜೊತೆಯಾಗಿ ಆತಿಥ್ಯ ವಹಿಸುತ್ತಿರುವ ಈ ಟೂರ್ನಿಯಲ್ಲಿ ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ, ಆಸ್ಟ್ರೇಲಿಯಾದ ಕ್ರಿಸ್ ಲಿನ್, ಶೇನ್ ವ್ಯಾಟ್ಸನ್, ಪಾಕ್ ಬ್ಯಾಟ್ಸ್ಮನ್ ಬಾಬರ್ ಅಝಾಮ್, ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್ ಬ್ರೆಂಡನ್ ಮೆಕಲಮ್, ಲ್ಯೂಕ್ ರೊಂಚಿ (ಕಿವೀಸ್) ಕೂಡ ಟೂರ್ನಿಯ ರಾಯಭಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಇಯಾನ್ ಮಾರ್ಗನ್ (ಇಂಗ್ಲೆಂಡ್), ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ), ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ), ರಶೀದ್ ಖಾನ್ (ಅಫ್ಘಾನಿಸ್ತಾನ) ಮೊದಲಾದ ಸ್ಟಾರ್ ಆಟಗಾರರೂ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿದೆ. ಆಗಸ್ಟ್ 30ರಂದು ಆರಂಭಗೊಳ್ಳುವ ಯೂರೋ ಟಿ20 ಸ್ಲ್ಯಾಮ್‌, ಸೆಪ್ಟೆಂಬರ್ 22ರಂದು ಕೊನೆಗೊಳ್ಳಲಿದೆ.

ಸದ್ಯ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ನಲ್ಲಿ ಒಂದು ಪಂದ್ಯವನ್ನೂ ಆಡದೆ ಟೂರ್ನಿಯಿಂದ ಹೊರ ಬಿದ್ದಿರುವ ಡೇಲ್ ಸ್ಟೇನ್, 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎರಡು ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಆ ವೇಳೆ ಸ್ಟೇನ್ ಭುಜದ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರ ನಡೆದಿದ್ದರು.

Story first published: Tuesday, July 2, 2019, 15:32 [IST]
Other articles published on Jul 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+