ಬ್ಯಾಟ್-ಬಾಲ್ ಕೆಳಗಿಟ್ಟ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಅಲ್ಬಿ ಮಾರ್ಕೆಲ್

ನವದೆಹಲಿ, ಜನವರಿ 10: ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಆಟಗಾರ ಅಲ್ಬಿ ಮಾರ್ಕೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮಾರ್ಕೆಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಲ್ಬಿ ಅವರು ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ 'ಫಿನಿಷರ್' ಖ್ಯಾತಿ ಗಳಿಸಿದ್ದರು.
ಮಾರ್ನೆ ಮಾರ್ಕೆಲ್ ಅವರ ಅಣ್ಣನಾಗಿರುವ ಅಲ್ಬಿಗೆ 37ರ ಹರೆಯ. 1 ಟೆಸ್ಟ್, 58 ಏಕದಿನ ಪಂದ್ಯ ಮತ್ತು 50 ಟಿ20 ಪಂದ್ಯಗಳಂತೆ ಒಟ್ಟು 11 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿದ್ದರು. ಒಟ್ಟಾರೆ ಸುಮಾರು 20 ವರ್ಷಗಳ ಕ್ರಿಕೆಟ್ ವೃತ್ತಿ ಜೀವನವನ್ನು ಅಲ್ಬಿ ಅನುಭವಿಸಿದ್ದರು.
'ಕ್ರಿಕೆಟ್ ಮೈದಾನದಿಂದ ಹೊರ ನಡೆಯುವ ಕಾಲ ಬಂದಿದೆ. ನಾನು ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಬಯಸಿದ್ದೇನೆ. ಕ್ರಿಕೆಟ್ ಬದುಕನ್ನು ಸಂಭ್ರಮಿಸಿದ್ದೇನೆ. ಇನ್ನುಮುಂದೆ ತಂಡದಿಂದ ಹೊರಗಿದ್ದು ಆಟವನ್ನು ಸಂಭ್ರಮಿಸಬೇಕೆಂದುಕೊಂಡಿದ್ದೇನೆ' ಎಂದು ನಿವೃತ್ತಿ ಘೋಷಿಸಿದ ಬಳಿಕ ಮಾರ್ಕೆಲ್ ಹೇಳಿದರು.
ಐಪಿಎಲ್ ನಲ್ಲಿ ಗಮನಾರ್ಹ ಆಟಗಾರರಾಗಿದ್ದ ಅಲ್ಬಿ ಮಾರ್ಕೆಲ್, ಐಪಿಎಲ್ ಆರಂಭಿಕ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ ಪರ ಆಡಿದ್ದರು. ಆ ನಂತರ ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಆಡಿದ ಅನುಭವ ಮಾರ್ಕೆಲ್ ಅವರದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications