ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾದ ಕಾಲಿನ್ ಅಕೆರ್ಮನ್: ವಿಡಿಯೋ

South Africa’s Colin Ackermann shatters T20 World Record

ಲೀಸೆಸ್ಟರ್, ಆಗಸ್ಟ್ 8: ಟಿ20 ಪಂದ್ಯವೊಂದರಲ್ಲಿ ಬರೋಬ್ಬರಿ 7 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕಾಲಿನ್ ಅಕೆರ್ಮನ್ ಹೊಸ ವಿಶ್ವದಾಖಲೆ ಬರೆದಿದ್ದಾರೆ. 'ಟಿ20 ಬ್ಲಾಸ್ಟ್ 2019' ಇಂಗ್ಲಿಷ್ ಕೌಂಟಿ ಪಂದ್ಯದಲ್ಲಿ ಕೇವಲ 18 ರನ್ನಿಗೆ 7 ವಿಕೆಟ್ ಪಡೆದು ಅಕೆರ್ಮನ್ ಟಿ20ಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತ vs ವಿಂಡೀಸ್: ದಾಖಲೆಗಳ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿಭಾರತ vs ವಿಂಡೀಸ್: ದಾಖಲೆಗಳ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ

ಆಗಸ್ಟ್ 7ರಂದು ಲೀಸೆಸ್ಟರ್ ಗ್ರೇಸ್‌ರೋಡ್‌ ಸ್ಟೇಡಿಯಂನಲ್ಲಿ ನಡೆದ ಟಿ20 ಬ್ಲಾಸ್ಟ್ ಟೂರ್ನಿಯ ಲೀಸೆಸ್ಟರ್‌ಶೈರ್ ಮತ್ತು ವಾರ್ವಿಕ್‌ಶೈರ್ ನಡುವಿನ ಪಂದ್ಯದಲ್ಲಿ ವಾರ್ವಿಕ್‌ಶೈರ್ ಇನ್ನಿಂಗ್ಸ್‌ನಲ್ಲಿ ಲೀಸೆಸ್ಟರ್‌ಶೈರ್ ನಾಯಕ ಅಕೆರ್ಮನ್ 4 ಓವರ್‌ಗೆ 18 ರನ್‌ ನೀಡಿ 7 ವಿಕೆಟ್ ಉರುಳಿಸಿದ್ದಾರೆ.

28ರ ಹರೆಯದ ಕಾಲಿನ್ ಅಕೆರ್ಮನ್ ಅವರು ವಾರ್ವಿಕ್‌ಶೈರ್ ಆಟಗಾರರಾದ ಮೈಕೆಲ್ ಬರ್ಗೆಸ್, ಸ್ಯಾಮ್ ಹೇನ್, ವಿಲ್ ರೋಡ್ಸ್, ಲಿಯಾಮ್ ಬ್ಯಾಂಕ್ಸ್, ಅಲೆಕ್ಸ್ ಥಾಮ್ಸನ್, ಹೆನ್ರಿ ಬ್ರೂಕ್ಸ್ ಮತ್ತು ಜೀತನ್ ಪಟೇಲ್ ಹೀಗೆ ಕ್ರಮವಾಗಿ 7 ವಿಕೆಟ್‌ಗಳನ್ನು ಪಡೆದರು.

1948ರ ಆ್ಯಷಸ್ ಟೆಸ್ಟ್‌ನಲ್ಲಿ ಬ್ರಾಡ್‌ಮನ್ ಬ್ಯಾಟಿಂಗ್: ಅಪರೂಪದ ವಿಡಿಯೋ1948ರ ಆ್ಯಷಸ್ ಟೆಸ್ಟ್‌ನಲ್ಲಿ ಬ್ರಾಡ್‌ಮನ್ ಬ್ಯಾಟಿಂಗ್: ಅಪರೂಪದ ವಿಡಿಯೋ

ಈ ಹಿಂದಿನ ಟಿ20 ದಾಖಲೆ ಮಲೇಷ್ಯಾ ಬೌಲರ್ ಅರುಲ್ ಸುಪಿಯ ಅವರ ಹೆಸರಿನಲ್ಲಿತ್ತು. 2011ರಲ್ಲಿ ಸಮರ್‌ಸೆಟ್‌ ಪ್ರತಿನಿಧಿಸಿದ್ದ ಅರುಲ್, ಗ್ಲಾಮೋರ್ಗನ್ ವಿರುದ್ಧ 5 ರನ್‌ಗೆ 6 ವಿಕೆಟ್‌ಗಳನ್ನು ಪಡೆದಿದ್ದರು. ಬುಧವಾರದ ಪಂದ್ಯದಲ್ಲಿ ಲೀಸೆಸ್ಟರ್ ಶೈರ್ 55 ರನ್‌ಗಳ ಗೆಲುವು ದಾಖಲಿಸಿತು.

Story first published: Thursday, August 8, 2019, 13:30 [IST]
Other articles published on Aug 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X