For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕೈ ತಪ್ಪಿದೆ ಐಸಿಸಿ ಟ್ರೋಫಿ: 2 ವರ್ಷದಲ್ಲಿ 4 ಬಾರಿ ಫೈನಲ್‌ನಲ್ಲಿ ಮುಖಭಂಗ

ಕ್ರಿಕೆಟ್‌ನಲ್ಲಿ ಕಡಿಮೆ ಅದೃಷ್ಟ ಹೊಂದಿರುವ ತಂಡ ಎಂದು ಹೇಳಿದರೆ ಅದು ದಕ್ಷಿಣ ಆಫ್ರಿಕಾ. ಈಗ ಅಷ್ಟೇ ಅಲ್ಲಾ ಇತಿಹಾಸದ ಪುಟುಗಳನ್ನು ನೋಡಿದರೂ, ದಕ್ಷಿಣ ಆಫ್ರಿಕಾಕ್ಕೆ ಗೆಲುವು ಕೊನೆಯ ಕ್ಷಣದಲ್ಲಿ ಕೈ ಕೊಟ್ಟಿದೆ. ದಕ್ಷಿಣ ಆಫ್ರಿಕಾ ಪಂದ್ಯವನ್ನು ಗೆದ್ದೇ ಬಿಡುತ್ತದೆ ಎಂದು ಭಾವಿಸಿದ್ದಾಗಲೇ, ಮೈದಾನದಲ್ಲಿ ಚಮತ್ಕಾರವನ್ನು ನಡೆಯುತ್ತಿದೆ. ಮತ್ತೆ ಹರಿಣಗಳ ಸಪ್ಪೆ ಮುಖ. ಐಸಿಸಿ ಟ್ರೋಫಿಯನ್ನು ತಮ್ಮ ದೇಶಕ್ಕೆ ಒಯ್ಯುವ ದಕ್ಷಿಣ ಆಫ್ರಿಕಾ ಕನಸು ಮುಂದೆ ಸಾಗುತ್ತಲೆ ಹೋಗಿದೆ.

ಮಲೇಷ್ಯಾದ ಕೌಲಾಲಂಪುರ್‌ದಲ್ಲಿ ನಡೆದ ಅಂಡರ್‌ 19 ಮಹಿಳಾ ಟಿ20 ವಿಶ್ವಕಪ್‌ನಲ್ಲೂ ದಕ್ಷಿಣ ಆಫ್ರಿಕಾದ ಅದೃಷ್ಟ ಕೈ ಕೊಟ್ಟಿದೆ. ಟೂರ್ನಿಯುದಕ್ಕೂ ಅಬ್ಬರಿಸಿ ಬೊಬ್ಬೆರೆದಿದ್ದ ಸ್ಟಾರ್ ಆಟಗಾರ್ತಿಯರು ಫೈನಲ್ ಪಂದ್ಯದಲ್ಲಿ ಮಂಕಾಗಿದ್ದಾರೆ. ಭಾರತದ ವಿರುದ್ಧ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಹೀನಾಯ ಸೋಲು ಕಂಡಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್‌ ಗೆದ್ದು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ಜಸ್ಟ್ 82 ರನ್‌ಗಳಿಗೆ ಆಲೌಟ್ ಆಯಿತು. ಭರ್ಜರಿ ಫಾರ್ಮ್‌ನಲ್ಲಿದ್ದ ಭಾರತ ಮಹಿಳಾ ತಂಡ 11.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಅಗತ್ಯ ರನ್‌ ಕಲೆ ಹಾಕಿ ಗೆಲುವಿನ ನಗೆ ಬೀರಿದೆ. ಈ ಮೂಲಕ ದಕ್ಷಿಣ ಆಫ್ರಿಕಾ 2 ವರ್ಷದಲ್ಲಿ ಸತತವಾಗಿ ನಾಲ್ಕನೇ ಫೈನಲ್‌ನಲ್ಲಿ ಸೋಲು ಕಂಡಿದೆ.

South Africa s Unlucky Streak Continues Another Final Loss in ICC Event

2 ವರ್ಷಗಳಲ್ಲಿ 4 ಟಿ20 ಫೈನಲ್‌ ಸೋಲು

2023ರಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಸ್ಥಿರ ಪ್ರದರ್ಶನವನ್ನು ನೀಡಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್‌ನಲ್ಲಿ ಅದೇ ಹಾಡು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 156 ರನ್‌ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತವನ್ನು ಚೇಜ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 137 ರನ್‌ ಕಲೆ ಹಾಕಿ 13 ರನ್‌ ಗಳಿಂದ ಸೋಲು ಕಂಡಿತು.

ಗೆಲ್ಲುವ ಪಂದ್ಯ ಕೈ ಚೆಲ್ಲಿದ ಆಫ್ರಿಕಾ

ಇನ್ನು ನಿಶ್ಚಿತವಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬಹಬುವಾಗಿ ಕಾಡುವ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆದಿದ್ದ ಭಾರತ ವಿರುದ್ದದ ಪಂದ್ಯ. ಈ ಪಂದ್ಯದಲ್ಲಿ ಭಾರತದ ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ ನಷ್ಟಕ್ಕೆ 176 ರನ್‌ ಸಿಡಿಸಿತು. ಈ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಅಮೋಘ ಆರಂಭವನ್ನು ನೀಡಿತು. ಅಲ್ಲದೆ ಪಂದ್ಯದ 15ನೇ ಓವರ್‌ ವರೆಗೂ ಸುಲಭವಾಗಿ ಪಂದ್ಯವನ್ನು ಹರಿಣಗಳು ಗೆದ್ದು ಬಿಡುತ್ತಾರೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಡೆತ್‌ ಓವರ್‌ನಲ್ಲಿ ಟೀಮ್ ಇಂಡಿಯಾದ ಶಿಸ್ತು ಬದ್ಧ ದಾಳಿ ಹಾಗೂ ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಹಿಡಿದ ಅಮೋಘ ಪಂದ್ಯ ಚಿತ್ರಣವನ್ನೇ ಬದಲು ಮಾಡಿತು. ದಕ್ಷಿಣ ಆಫ್ರಿಕಾ ಎರಡನೇ ಬಾರಿ ನಿರಾಸೆ ಅನುಭವಿಸಿತು.

South Africa s Unlucky Streak Continues Another Final Loss in ICC Event

ಇನ್ನು ಕಳೆದ ಬಾರಿಯೂ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸ್ಥಿರ ಪ್ರದರ್ಶನವನ್ನು ನೀಡಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 126 ರನ್‌ ಕಲೆ ಹಾಕಿತು. ಈ ಮೂಲಕ ಸತತ ಮೂರನೇ ಬಾರಿಗೆ ಐಸಿಸಿ ಮೆಗಾ ಈವೆಂಟ್‌ನ ಫೈನಲ್‌ನಲ್ಲಿ ಮುಗ್ಗರಿಸಿತು.

Story first published: Sunday, February 2, 2025, 18:00 [IST]
Other articles published on Feb 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+