ವಿಶ್ವಕಪ್ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡದಲ್ಲಿ ಬ್ರಹ್ಮಾಸ್ತ್ರಗಳಿವೆ: ಡೇಲ್ ಸ್ಟೇನ್

ಕೇಪ್‌ಟೌನ್, ಮೇ 16: ವೇಗದ ಬೌಲಿಂಗ್‌ಗಾಗಿ ವಿಶ್ವ ಖ್ಯಾತಿ ಹೊಂದಿರುವ ಡೇಲ್ ಸ್ಟೇನ್ ವಿಶ್ವಕಪ್ ಕನಸು ನನಸಾಗಿಸಿಕೊಳ್ಳಲು ಈ ಬಾರಿಯ ವಿಶ್ವಕಪ್ ಕಡೇ ಅವಕಾಶ. ಈ ಬಾರಿ ವಿಶ್ವಕಪ್ ಗೆಲ್ಲಲು ಬೇಕಾದ ಬ್ರಹ್ಮಾಸ್ತ್ರಗಳು ತಂಡದಲ್ಲಿ ಇವೆ ಎಂದು ಡೇಲ್ ಸ್ಟೇನ್ ಹೇಳಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಓಟಿಸ್ ಗಿಬ್ಸನ್ ಇತ್ತೀಚೆಗೆ ಹೇಳಿಕೆ ನೀಡಿ, ತಂಡದಲ್ಲಿನ ಮಾರಕ ವೇಗಿಗಳಾದ ಡೇಲ್ ಸ್ಟೇನ್ ಮತ್ತು ಕಾಗಿಸೋ ರಬಾಡ ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದರು. ಅದರ ಬೆನ್ನಲ್ಲೇ ಸ್ಟೇನ್, ತಂಡ ಈ ಬಾರಿಯ ವಿಶ್ವಕಪ್ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ರಬಾಡಾ ಅವರ ಅದ್ಭುತ ಬೌಲಿಂಗ್ ಉಲ್ಲೇಖಿಸಿ ಮಾತನಾಡಿದ ಡೇಲ್, 'ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕನ್ನೋದು ಇಡೀ ದಕ್ಷಿಣ ಆಫ್ರಿಕಾ ತಂಡದ ಕನಸು. ಇದು ಬರೀ ಗ್ರೇಮ್ ಸ್ಮಿತ್ ಕನಸಲ್ಲ, ಇಡೀ ದೇಶವೇ ಇಂಥ (ರಬಾಡಾ) ಅಸ್ತ್ರಗಳನ್ನು ಬಳಸಿ ವಿಶ್ವಕಪ್ ಗೆಲ್ಲೋದನ್ನು ಬಯಸಿದೆ' ಎಂದರು.
ಈಗ 36ರ ಹರೆಯಕ್ಕೆ ಕಾಲಿರಿಸುತ್ತಿರುವ ಡೇಲ್ ಸ್ಟೇನ್, ವೇಗದ ಬೌಲಿಂಗ್ ಗಾಗಿ ವಿಶ್ವದಲ್ಲೇ ಮಿಂಚುಹರಿಸಿ ಮತ್ತೆ ಸುಮಾರು ನಾಲ್ಕು ವರ್ಷಗಳ ಕಾಲ ಗಾಯಾಳಾಗಿ ತಂಡದಿಂದ ಹೊರಗಿದ್ದು ನಿರಾಶೆ ಅನುಭವಿಸಿದ್ದರು. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಚೆಂಡು ಎಸೆದಿದ್ದ ಸ್ಟೇನ್, ಎರಡೂ ಪಂದ್ಯಗಳಲ್ಲೂ ಆರ್‌ಸಿಬಿ ಗೆಲುವಿಗೆ ಕಾರಣರಾಗಿದ್ದರು.
ಈ ಬಾರಿ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲಲೇಬೇಕೆಂದು ಹಾತೊರೆಯುತ್ತಿರುವುದಕ್ಕೆ ಕಾರಣ, ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಈ ವರೆಗೆ (50 ಓವರ್‌ಗಳ) ಒಂದೂ ವಿಶ್ವಕಪ್ ಜಯಿಸಿಲ್ಲ. 1992ರಲ್ಲಿ ಸೆಮಿಫೈನಲ್‌ವರೆಗೂ ಲಗ್ಗೆಯಿಟ್ಟಿದ್ದ ದಕ್ಷಿಣ ಆಫ್ರಿಕಾ, ಆ ಪಂದ್ಯದಲ್ಲಿ ಸೋಲು ಆಘಾತ ಅನುಭವಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications