South Africa: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಪೆಟ್ಟು
ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮುಗಿದೆವೆ. ಚಾಂಪಿಯನ್ಸ್ ಟ್ರೋಫಿಯ "ಬಿ" ಗುಂಪಿನಿಂದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಇಂಗ್ಲೆಂಡ್ ವಿರುದ್ಧ ಸಂಘಟಿತ ಆಟದ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಮುಂದಿನ ಹಂತವನ್ನು ಪ್ರವೇಶಿಸಿದೆ.
ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಿಯಮಿತ ನಾಯಕ ತೆಂಬು ಬವುಮಾ ಗಾಯಕ್ಕೆ ತುತ್ತಾಗಿದ್ದರಿಂದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ತಂಡವನ್ನು ಐಡೆನ್ ಮಾರ್ಕಮ್ ಮುನ್ನಡೆಸಿದ್ದರು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 38.2 ಓವರ್‌ಗಳಲ್ಲಿ 179 ರನ್‌ಗಳಿಗೆ ಸರ್ವಪತನ ಹೊಂದಿತು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಸೇರಿಸಿ ಜಯ ಸಾಧಿಸಿತು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಐಡೆನ್ ಮಾರ್ಕ್ರಮ್ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಈ ಪಂದ್ಯದ ವೇಳೆ ಗಾಯದಿಂದ ಬಳಲುತ್ತಿದ್ದರು. ಇವರಿಗೆ ಮಂಡಿರಜ್ಜು ಬಹುವಾಗಿ ಕಾಡುತ್ತಿದೆ. ಇದಾದ ನಂತರ ಅವರು ಮೈದಾನದಿಂದ ಹೊರಗೆ ಹೋಗಿ ಇಡೀ ಸಮಯ ಮೈದಾನದ ಹೊರಗೆ ಇದ್ದರು. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಹೆನ್ರಕ್ ಕ್ಲಾಸೆನ್ ಅವರು ಮುನ್ನಡೆಸಿದರು.
ಸೆಮೀಸ್‌ಗೂ ಮುನ್ನವೇ ಪೆಟ್ಟು
ಇಂಗ್ಲೆಂಡ್ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 174 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಾಗ, ಮಾರ್ಕ್ರಮ್ ಬ್ಯಾಟಿಂಗ್ ಮಾಡಲು ಬರಲಿಲ್ಲ. ಇದಾದ ಬಳಿಕ ಇವರ ಗಾಯದ ಬಗ್ಗೆ ಮಾತುಗಳು ಕೇಳಲಾರಂಭಿಸಿದವು. ಇವರ ಗಾಯದ ಬಗ್ಗೆ ಊಹಾಪೋಹಗಳು ಹರಿದಾಡಲು ಆರಂಭಿಸಿದವು. ಈ ಬಗ್ಗೆ ಏಡಮ್ ಮಾರ್ಕ್ರಮ್ ಪಂದ್ಯದ ಬಳಿಕ ದೊಡ್ಡ ಮಾಹಿತಿ ನೀಡಿದ್ದಾರೆ. ಸ್ನಾಯು ಸೆಳೆತವಾಗಿದೆ. ಹೆಚ್ಚಿನ ಸಮಸ್ಯೆ ಇಲ್ಲ ಮತ್ತು ಮುಂದಿನ ಕೆಲವು ದಿನಗಳಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲರ್‌ಗಳ ಶಿಸ್ತು ಬದ್ಧ ದಾಳಿಯನ್ನು ಐಡೆನ್ ಮಾರ್ಕ್ರಾಮ್ ಶ್ಲಾಘಿಸಿದರು. ಆರಂಭದಲ್ಲಿ ಪಿಚ್ ನಿಧಾನವಾಗಿತ್ತು, ಹುಡುಗರು ಪರಿಸ್ಥಿತಿಗೆ ಅನುಸಾರವಾಗಿ ಬೌಲಿಂಗ್ ನಡೆಸಿದರು. ಮಾರ್ಕೊ ಜಾನ್ಸೆನ್ ತಂಡದ ಬಹುಮುಖ್ಯ ಆಸ್ತಿ ಎಂದು ಬಣ್ಣಿಸಿದರು. ಮಾರ್ಕೊ ಜಾನ್ಸೆನ್ ತಂಡದ ಬಹುಮುಖ್ಯ ಆಸ್ತಿ ಎಂದು ಬಣ್ಣಿಸಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಾನ್ಸೆನ್ ಅಮೋಘ ಬೌಲಿಂಗ್ ನಡೆಸಿದ್ದರು. ಇವರು ಏಳು ಓವರ್ ಬೌಲಿಂಗ್ ನಡೆಸಿ 39 ರನ್ ನೀಡಿ ಇಂಗ್ಲೆಂಡ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.
ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ
ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಅಲ್ಲದೆ ಆಡಿರುವ ಮೂರು ಪಂದ್ಯಗಳಲ್ಲಿ 2 ಜಯ, 1 ಪಂದ್ಯ ರದ್ದಾಗಿದ್ದರಿಂದ 5 ಅಂಕ ಕಲೆ ಹಾಕಿ, ಅಗ್ರ ಸ್ಥಾನೀಯವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications