WTC Final: ಟೀಮ್ ಇಂಡಿಯಾಕ್ಕೆ ಇನ್ನು ಇದೆ WTC ಫೈನಲ್ ಪ್ರವೇಶಿಸುವ ಅವಕಾಶ
ಪಾಕಿಸ್ತಾನ ತಂಡವನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಮಣಿಸಿದ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. ಇನ್ನು ಒಂದು ಸ್ಲಾಟ್‌ಗೆ ಮೂರು ತಂಡಗಳ ನಡುವೆ ಫೈಟ್ ನಡೆಯುತ್ತಿದೆ. ಟೀಮ್ ಇಂಡಿಯಾಗೂ ಈ ಬಾರಿಯೂ ಫೈನಲ್‌ಗೆ ಪ್ರವೇಶಿಸುವ ಕನಸು ಕಾಣುತ್ತಿದೆ. ಒಂದು ವೇಳೆ ಟೀಮ್ ಇಂಡಿಯಾ ಇದರಲ್ಲಿ ಯಶಸ್ವಿಯಾದಲ್ಲಿ ಫೈನಲ್‌ಗೆ ಹ್ಯಾಟ್ರಿಕ್ ಪ್ರವೇಶಿಸುವ ಆಸೆಯನ್ನು ಹೊಂದಿದೆ. ಇನ್ನು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಸಹ ಈ ಫೈನಲ್ ಸ್ಥಾನದ ಮೇಲೆ ಕಣ್ಣು ನೆಟ್ಟಿವೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೆಲ್ಬೋರ್ನ್ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಭಾರತ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಕೊನೆಯ ಟೆಸ್ಟ್ ಪಂದ್ಯ ಗೆದ್ದು, ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಕನಸು ಹೊಂದಿದೆ.

ಮೆಲ್ಬೋರ್ನ್ ಟೆಸ್ಟ್‌ನ ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 333 ರನ್‌ಗಳ ಮುನ್ನಡೆ ಸಾಧಿಸಿದೆ. ಇದೀಗ ಈ ಟೆಸ್ಟ್‌ನ ಕೊನೆಯ ದಿನವಾದ ಸೋಮವಾರ ಪಂದ್ಯ ನಡೆಯಲಿದೆ. ಫೈನಲ್‌ಗೆ ತಲುಪಬೇಕಾದರೆ ಭಾರತ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಜನವರಿ 3 ರಂದು ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲ್ಲುವುದು ಅನಿವಾರ್ಯ.
ಭಾರತ ಹೇಗೆ ಪ್ರವೇಶಿಸಬಹುದು?
ಒಂದು ವೇಳೆ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾದರೆ, ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಮುಂದೆ ಯಾವುದೇ ಟೆಸ್ಟ್ ಸರಣಿಗಳು ಇಲ್ಲ. ಆದರೆ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಪ್ರವಾಸವನ್ನು ಬೆಳೆಸಲಿದೆ.

ಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಲಂಕಾ ತಂಡ ಆಸೀಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದರೆ, ಅಥವಾ ಎರಡೂ ಪಂದ್ಯಗಳು ಡ್ರಾದಲ್ಲಿ ಅಂತ್ಯವಾದರೆ, ಭಾರತ ಫೈನಲ್ ಪ್ರವೇಶಿಸಬಹುದು. ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧದ ಸರಣಿಯನ್ನು 1-0 ಅಂತರದಲ್ಲಿ ಗೆದ್ದರೂ ಭಾರತ ಫೈನಲ್ ಪ್ರವೇಶಿಸಬಹುದು.
ದಕ್ಷಿಣ ಆಫ್ರಿಕಾಕ್ಕೆ ಮೊದಲ ಸ್ಥಾನ
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ಆಡಿದ 11 ಟೆಸ್ಟ್ ಪಂದ್ಯಗಳಲ್ಲಿ 7 ಗೆಲುವು ಸಾಧಿಸಿದ್ದು, 66.67ರ ಗೆಲುವಿನ ಶೇಕಡಾ ವಾರಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಸೀಸ್ ಗೆಲುವಿನ ಶೇಕಡಾವಾರು 58.89 ಆಗಿದೆ. ಈ ವೇಳೆ ಆಸೀಸ್ 9 ಪಂದ್ಯಗಳನ್ನು ಗೆದ್ದಿದೆ. ಅಂಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, 17 ಪಂದ್ಯಗಳಲ್ಲಿ 9 ಗೆಲುವು, ಸಾಧಿಸಿದ್ದು ಗೆಲುವಿನ ಶೇಕಡಾವಾರು 55.88 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications