ಟೆಸ್ಟ್ ತಂಡ ಪ್ರಕಟ: ಜಡೇಜ ಇನ್, ಹರ್ಭಜನ್ ಸಿಂಗ್ ಔಟ್
ಮುಂಬೈ, ಅ.19: ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧದ ಅಂತಿಮ ಎರಡು ಏಕದಿನ ಪಂದ್ಯ ಮತ್ತು ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ಕ್ರಿಕೆಟ್ ತಂಡವನ್ನು ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದೆ. ರವೀಂದ್ರ ಜಡೇಜಾ ಟೆಸ್ಟ್ ತಂಡಕ್ಕೆ ಮರಳಿದ್ದರೆ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ನಾಲ್ಕು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಟೆಸ್ಟ್ ಗಳಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದೆ. [ಗಾಂಧಿ-ಮಂಡೇಲಾ ಕ್ರಿಕೆಟ್ ಸರಣಿ ಫುಲ್ ಗೈಡ್]
ಯಾರು ಒಳಗೆ: ರವೀಂದ್ರ ಜಡೇಜ, ಮುರಳಿ ವಿಜಯ್, ವೃದ್ಧಿಮಾನ್ ಸಹಾ
ಯಾರು ಹೊರಕ್ಕೆ: ಕರುಣ್ ನಾಯರ್, ಹರ್ಭಜನ್ ಸಿಂಗ್, ನಮನ್ ಓಜಾ
ಗಾಯಾಳುಗಳು: ಆರ್ ಅಶ್ವಿನ್, ಇಶಾಂತ್ ಶರ್ಮ
ಮೊದಲ ಟೆಸ್ಟ್ : ನವೆಂಬರ್ 5-9 ಮೊಹಾಲಿಯಲ್ಲಿ (ಗುರುವಾರದಿಂದ ಸೋಮವಾರ)
ಎರಡನೇ ಟೆಸ್ಟ್: ನವೆಂಬರ್ 14-18 ಬೆಂಗಳೂರು (ಶನಿವಾರದಿಂದ ಬುಧವಾರ)
ಮೂರನೇ ಟೆಸ್ಟ್ : ನವೆಂಬರ್ 25-29 (ಬುಧವಾರ ದಿಂದ ಭಾನುವಾರ) ನಾಗ್ಪುರ
ನಾಲ್ಕನೇ ಟೆಸ್ಟ್ : ಡಿಸೆಂಬರ್ 3-7 (ಗುರುವಾರ ದಿಂದ ಸೋಮವಾರ) ನವದೆಹಲಿ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿಲ್ಲ.

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ರವೀಂದ್ರ ಜಡೇಜ, ಆರ್ ಅಶ್ವಿನ್, ಅಮಿತ್ ಮಿಶ್ರಾ, ವರುಣ್ ಅರೋನ್, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಉಮೇಶ್ ಯಾದವ್.
ಅಧ್ಯಕ್ಷರ XI ತಂಡ, 2 ದಿನಗಳ ಅಭ್ಯಾಸ ಪಂದ್ಯಕ್ಕೆ ತಂಡ
ಚೇತೇಶ್ವರ್ ಪೂಜಾರಾ (ನಾಯಕ), ಕೆಎಲ್ ರಾಹುಲ್, ಉನ್ಮುಕ್ತ್ ಚಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ನಮನ್ ಓಜಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕುಲದೀಪ್ ಯಾದವ್, ಶ್ರಾದೂಲ್ ಠಾಕೂರ್, ಶೆಲ್ಡನ್ ಜಾಕ್ಸನ್, ಕರಣ್ ಶರ್ಮ, ನಾಥು ಸಿಂಗ್.
ಶ್ರೀಲಂಕಾದಲ್ಲಿ ಐತಿಹಾಸಿಕ ಗೆಲುವಿನ ನಂತರ ವಿರಾಟ್ ಕೊಹ್ಲಿ ಅವರಿಗೆ ತವರು ನೆಲದಲ್ಲಿ ಇದು ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಎಂಎಸ್ ಧೋನಿ ಅವರು ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಕೊನೆ ಟೆಸ್ಟ್ ಸರಣಿ, ನವೆಂಬರ್ 16, 2013ರ ನಂತರ ಇದೇ ಮೊದಲ ಟೆಸ್ಟ್ ಸರಣಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications