ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬೆಂಗಳೂರಲ್ಲಿ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್.18: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತದ ಟಿ-20 ಮತ್ತು ಏಕದಿನ ತಂಡವನ್ನು ಸೆಪ್ಟೆಂಬರ್ 20 ರಂದು ಘೋಷಣೆ ಮಾಡಲಾಗುವುದು ಎಂದು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ತಿಳಿಸಿದೆ.
ಭಾರತದ ವಿರುದ್ಧ 3 ಟಿ-20, 5 ಏಕದಿನ ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿದೆ. ಬೆಂಗಳೂರಿನಲ್ಲಿ ಸಭೆ ಸೇರಲಿರುವ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಅಂತಿಮ ಮಾಡಲಿದೆ. ಎಂಎಸ್ ಧೋನಿ ಏಕದಿನ ಮತ್ತು ಟಿ-20ಗೆ ನಾಯಕರಾಗಿ ಮುಂದುವರಿಯಲಿದ್ದಾರೆ.[ಹೀರೋಸ್ ತಂಡಕ್ಕೆ ಹೀರೋ ಆದ ಎಂಎಸ್ ಧೋನಿ]

ಸಮಿರಿ ಅಧ್ಯಕ್ಷರ ಇಲೆವೆನ್ ತಂಡವನ್ನು ಆಯ್ಕೆ ಮಾಡಲಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಸಭೆ ಸೇರಲಿರುವ ಸಮಿತಿ ಅಭ್ಯಾಸ ಪಂದ್ಯವಾಡಲು ಅಧ್ಯಕ್ಷರ ಇಲೆವೆನ್ ತಂಡಕ್ಕೆ ಆಟಗಾರರ ಹೆಸರನ್ನು ಅಂತಿಮ ಮಾಡಲಿದೆ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸಭೆಯ ನಂತರ ತಂಡವನ್ನು ಪ್ರಕಟಿಸಲಿದ್ದಾರೆ. ಶ್ರೀಲಂಕಾಕ್ಕೆ ತೆರಳಿದ್ದ ಭಾರತ ತಂಡ ಟೆಸ್ಟ್ ಸರಣಿ ವಿಜಯದೊಂದಿಗೆ ಹಿಂದಿರುಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications