For Quick Alerts
ALLOW NOTIFICATIONS  
For Daily Alerts
 

IND vs SA 2nd Test: ಭಾರತಕ್ಕೆ 549 ರನ್‌ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಗುವಾಹಟಿ: ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ದಕ್ಷಿಣ ಆಫ್ರಿಕಾ 549 ರನ್‌ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಲ್ಲಿ ಮಾತ್ರ 2 ಪಂದ್ಯಗಳ ಟೆಸ್ಟ್‌ ಸರಾಣಿ ಸಮಬಲವಾಗುತ್ತದೆ. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿತು. ಅಂತೆಯೇ ಮಂಗಳವಾರವೂ ಇದೇ ಪ್ರದರ್ಶನ ಮುಂದುವರೆಸಿತು.

ಮಂಗಳವಾರ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 26 ರನ್‌ಗಳಿಂದ ಆಟ ಮುಂದುವರೆಸಿದ ಪ್ರವಾಸಿ ದಕ್ಷಿಣ ಆಫ್ರಿಕಾ, 59 ರನ್‌ಗಳಿಗೆ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಸ್ಥಿರ ಪ್ರದರ್ಶನ ನೀಡುತ್ತಿದ್ದ ರಯಾನ್‌ ರಿಕಲ್ಟನ್‌ 64 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 35 ರನ್‌ ಬಾರಿಸಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ರವೀಂದ್ರ ಜಡೇಜಾ ಏಡೆನ್‌ ಮಾರ್ಕ್ರಮ್‌ ಅವರಿಗೂ ಖೆಡ್ಡ ತೋಡಿದರು. ಮಾರ್ಕ್ರಮ್‌ ಆಟ 29 ರನ್‌ಗೆ ಸೀಮಿತವಾಯಿತು.

South Africa set challenging target of 549 runs for India to level the series in 2nd Test

ಸರಣಿಯಲ್ಲಿ ಟೀಮ್ ಇಂಡಿಯಾ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಂತೆ ಕಾಡಿದ ತೆಂಬು ಬುವಮಾ ತಾವು ಎದುರಿಸಿದ 11ನೇ ಎಸೆತದಲ್ಲಿ ವಾಷಿಂಗ್ಟನ್‌ ಸುಂದರ್‌ಗೆ ವಿಕೆಟ್‌ ಒಪ್ಪಿಸಿದರು. 77 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಟೋನಿ ಡಿ ಜೋರ್ಜಿ ಜೋಡಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 162 ಎಸೆತಗಳಲ್ಲಿ 101 ರನ್‌ ಸಿಡಿಸಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಟೋನಿ ಡಿ ಜೋರ್ಜಿ 49 ರನ್‌ ಬಾರಿಸಿದಾಗ ಜಡೇಜಾಗೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಸ್ಟಬ್ಸ್‌ ಬ್ಯಾಟಿಂಗ್ ಸೊಬಗು

5ನೇ ವಿಕೆಟ್‌ಗೆ ಟ್ರಿಸ್ಟನ್‌ ಸ್ಟಬ್ಸ್‌ ಅವರನ್ನು ಸೇರಿಕೊಂಡ ವಿಯಾನ್ ಮುಲ್ಡರ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯ ಉತ್ತಮ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 500ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಈ ಜೋಡಿ 123 ಎಸೆತಗಳಲ್ಲಿ 82 ರನ್‌ ಸೇರಿಸಿತು. ಈ ವೇಳೆ ಶತಕದತ್ತ ಮುಂದೆ ಸಾಗುತ್ತಿದ್ದ ಟ್ರಿಸ್ಟನ್‌ ಸ್ಟಬ್ಸ್‌ ಅವರಿಗೆ ಜಡೇಜಾ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 260 ರನ್‌ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಭಾರತದ ಪರ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 4 ವಿಕೆಟ್‌ ಕಬಳಿಸಿದರು.

Story first published: Tuesday, November 25, 2025, 15:15 [IST]
Other articles published on Nov 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+